Daily Horoscope

Select Your Language

Notifications

webdunia
webdunia
webdunia
webdunia

ಪ್ಯಾನಿಕ್ ಬಟನ್ ಹೊಂದಿರುವ ಎಲ್‌ಜಿ ಸ್ಮಾರ್ಟ್‍ಫೋನ್

ಎಲ್‍ಜಿ ಸ್ಮಾರ್ಟ್‌ಫೋನ್
ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪೆನಿ ಎಲ್‌ಜಿ 2017ಕೆ ಸೀರೀಸ್ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎಲ್‌ಜಿ ಕೆ 10 ಹೆಸರಿನ ಈ ಸ್ಮಾರ್ಟ್‌ಫೋನಲ್ಲಿ ವಿಶೇಷವೊಂದಿದೆ. ಇದರಲ್ಲಿ ಎಸ್ಓಎಸ್ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. 
 
ಈ ಪ್ಯಾನಿಕ್ ಬಟನ್ ತುರ್ತು ಸಂಖ್ಯೆ 112ಕ್ಕೆ ಆಟೋಮೆಟಿಕ್ ಆಗಿ ಸಂಪರ್ಕದಲ್ಲಿರುತ್ತದೆ. ಏನಾದರೂ ಅಪಾಯ ಇಲ್ಲವೆ ಅಗತ್ಯ ಸಮಯದಲ್ಲಿ ಪವರ್ ಬಟನ್ ಮೂರು ಬಾರಿ ಒತ್ತಿದರೆ 112ಗೆ ಕರೆಹೋಗುತ್ತದೆ. ಈ ಸ್ಮಾರ್ಟ್‌ಫೋನ್ ಬೆಲೆ ರೂ.13,990 ಎಂದು ಕಂಪೆನಿ ತಿಳಿಸಿದೆ. ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಈ ತಿಂಗಳ 26ರಿಂದ ಈ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ.
 
ಫೋನ್ ವಿಶೇಷತೆಗಳು
* 5.3 ಇಂಚಿನ ಸ್ಪರ್ಶಸಂವೇದಿ ಪರದೆ
* ಆಂಡ್ರಾಯ್ಡ್ 7.0 ನೋಗಟ್
* 1.5 ಗಿಗಾ ಹಡ್ಜ್ ಪ್ರೋಸೆಸರ್
* 2 ಜಿಬಿ ರ‍್ಯಾಮ್
* 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* 16 ಜಿಬಿ ಆಂತರಿಕ ಮೆಮೊರಿ
* 4ಜಿ ಸೌಲಭ್ಯ
* 2800 ಎಂಎಎಚ್ ಬ್ಯಾಟರಿ ಸಾಮರ್ಥ್ಯ
* ಬ್ಲ್ಯಾಕ್, ಗೋಲ್ಡ್, ಟೈಟಾನಿಯಂ ಬಣ್ಣಗಳಲ್ಲಿ ಲಭ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿ ಕೆ.ಪಿ ನಂಜುಂಡಿ ವಿರುದ್ಧ ಅಪಹರಣ ಪ್ರಕರಣ ದಾಖಲು