Select Your Language

Notifications

webdunia
webdunia
webdunia
webdunia

ಅಧಿವೇಶನಕ್ಕೂ ರಾಹುಕಾಲದ ಕಾಟ

ಅಧಿವೇಶನಕ್ಕೂ ರಾಹುಕಾಲದ ಕಾಟ
ಬೆಂಗಳೂರು , ಶುಕ್ರವಾರ, 23 ಸೆಪ್ಟಂಬರ್ 2016 (12:21 IST)
ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಇಂದು ನಡೆಸಲಾಗುತ್ತಿರುವ ವಿಶೇಷ ಅಧಿವೇಶನ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೆ 12 ರ ಬಳಿಕ ಅಧಿವೇಶನ ಆರಂಭವಾಗುತ್ತಿದೆ. ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ ಅವರ ಸಲಹೆ ಇದಕ್ಕೆ ಕಾರಣವಾಯ್ತೇ? ಎಂಬ ಅನುಮಾನ ವ್ಯಕ್ತವಾಗಿದೆ. 
ಹೌದು, ಇಂದು ಬೆಳಿಗ್ಗೆ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ರೇವಣ್ಣ ರಾಹುಕಾಲ ಮುಗಿದ ಮೇಲೆ ಕಲಾಪ ನಡೆಸುವುದು ಸೂಕ್ತ ಎಂದು ಹೇಳಿದ್ದರೆಂದು ವರದಿಯಾಗಿದೆ. 10.30ರಿಂದ 12 ಗಂಟೆಯವರೆಗೆ ರಾಹುಕಾಲವಿದೆ. ಮಹತ್ವದ ಅಧಿವೇಶನ ಇದಾಗಿರುವುದರಿಂದ ರಾಹುಕಾಲದ ನಂತರ ಅಂದರೆ 11 ರ ಬದಲು 12 ಗಂಟೆಗೆ ಅಧಿವೇಶನ ಪ್ರಾರಂಭಿಸಿದರೆ ಒಳ್ಳೆಯದು ಎಂದು ರೇವಣ್ಣ ಹೇಳಿದ್ದಾರೆ. 

ನಿರ್ಣಯದ ಕರಡು ಪ್ರತಿ ಪೂರ್ಣವಾಗದ ಹಿನ್ನೆಲೆಯಲ್ಲಿ  12. 30ಕ್ಕೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸಹ ಹೇಳಲಾಗುತ್ತಿದೆ.
 
ಅಧಿವೇಶನದಲ್ಲಿ ಯಾವ ನಿಲುವನ್ನು ಹೊಂದಿರಬೇಕು ಎಂಬುದು ಕೂಡ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಚರ್ಚೆಯಾಯ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಮಾಯಾವತಿಗಿಂತ ರಿಕ್ಷಾ ಚಾಲಕ ಉತ್ತಮ: ದಯಾಶಂಕರ್ ಸಿಂಗ್