ಮನೆ ಊಟದಿಂದ ಬೇಸತ್ತಿರೋ ಜನತೆಗೆ ಮತ್ತೊಂದು ಆಹಾರ ಮೇಳ ಕೈ ಬೀಸಿ ಕರೆಯುತ್ತಿದೆ.
ಹುಬ್ಬಳ್ಳಿಯ ಕ್ಲಾರ್ಕ್ಸ್ ಇನ್ ಹೋಟೆಲ್ ಈಗಾಗಲೇ ವಿವಿಧ ರುಚಿಯ ಖಾದ್ಯಗಳನ್ನು ಪರಿಚರಿಸುತ್ತಾ ಬಂದಿದ್ದು, ಅದರಂತೆ ಅ.4 ರಿಂದ ಅ.13 ರವರೆಗೆ ಜನತೆಗೆ ಮತ್ತೊಂದು ಆಹಾರ ಮೇಳದೊಂದಿಗೆ ಬಂಗಾಲಿ ಶೈಲಿಯ ಆಹಾರವನ್ನು ಉಣಬಡಿಸಲು ಸಜ್ಜಾಗಿದೆ. ಹೀಗಂತ ಹೋಟೆಲ್ ಮ್ಯಾನೇಜರ್ ಆರ್.ಕೆ.ಮಹಾರಾಣಾ ಹೇಳಿದ್ದಾರೆ.
ಆಹಾರ ಮೇಳವು ಪ್ರತಿ ದಿನ ಸಂಜೆ 7.30 ರಿಂದ ರಾತ್ರಿ 11 ರವರೆಗೆ ನಡೆಯಲಿದೆ. ಬಾಣಸಿಗ ಸಂಜಯ ಮೊಂಡಾಲ್ ಹಾಗೂ ಪಶ್ಚಿಮ ಬಂಗಾಳದಿಂದ ಆಗಮಿಸಿದ ಬಾಣಸಿಗರು ಸಾಂಪ್ರದಾಯಿಕ ಬಂಗಾಲಿ ಶೈಲಿಯಲ್ಲಿ ಆಹಾರ ತಯಾರಿಸಲಿದ್ದಾರೆ.
ಆಹಾದ ಮೇಳ ಬಫೆ ಪದ್ದತಿ ಆಗಿದೆ. ಸೂಪ್, ಸಲಾಡ್, ಚಾಟ್, ಸ್ಮಾರ್ಟರ್, ಮೇನ್ ಕೋರ್ಸ್, ಸಿಹಿ ತಿಂಡಿ ಸೇರಿದಂತೆ 44 ಕ್ಕಿಂತ ಹೆಚ್ಚಿನ ಬಂಗಾಲದ ಆಯ್ದ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತಿದೆ.
ಮೂರು ಮೇನು ಸಿದ್ದಪಡಿಸಲಾಗಿದೆ ಎಂದಿದ್ದಾರೆ. ಪ್ರತಿದಿನ ಒಂದೊಂದು ಮೇನುವಿನ ಪ್ರಕಾರ ಆಹಾರ ಸಿದ್ದಪಡಿಸಲಾಗುವುದು. ಮೇಳದಲ್ಲಿ ಮೀನು, ಏಡಿ, ಸಿಗಡಿ, ಚಿಕ್ಕನ್, ಡಾರ್ಜಿಲಿಂಗ್ ವೆಜ್ ಸ್ಟ್ರಿಂಗ್ ರೋಲ್, ಚಿಕ್ಕನ್ ಡಾಲನಾ, ಮಿಡ್ನಾಪುರ ವೆಜ್ ಸೂಕ್ತೂ, ರಸಗುಲ್ಲಾ, ಸಂದೇಶ, ಕುಲ್ಪಿ, ಐಸ್ ಕ್ರೀಮ್ ಸೇರಿದಂತೆ ಹತ್ತು ಹಲವಾರು ಆಹಾರ ಸಿದ್ದಪಡಿಸಲಾಗುವುದು ಎಂದಿದ್ದಾರೆ.