Daily Horoscope
✕

ಜಾತ್ರೆಯಂತೆ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ

Webdunia
ಗುರುವಾರ, 25 ಜೂನ್ 2020 (16:17 IST)
ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರವೊಂದು ಜಾತ್ರೆಯಂತೆ ಸಿಂಗಾರಗೊಂಡು ಗಮನ ಸೆಳೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ  ತಾಲ್ಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ  ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬರೆಯಲು ಬಂದಂತಹ ವಿದ್ಯಾರ್ಥಿಗಳು ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಆತಂಕಗೊಳಗಾದೇ ಪರೀಕ್ಷೆಯನ್ನು ಎದುರಿಸಲು ಗ್ರಾಮ ಪಂಚಾಯಿತಿ ಹಾಗೂ ಶಾಲಾ ಆಡಳಿತ ಮಂಡಳಿ ಸಕಲ ಸಿದ್ಧತೆಯನ್ನು ಮಾಡುವ ಮೂಲಕ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿತ್ತು.

ಪರೀಕ್ಷಾ ಕೇಂದ್ರದ ಹೊರಗಡೆ ವಿದ್ಯಾರ್ಥಿಗಳ ಸ್ವಾಗತಕ್ಕೆ ಬಾಳೆ ಕಂದು, ಮಾವಿನ ತೋರಣದಿಂದ ಅಲಂಕಾರ ಮಾಡಲಾಗಿತ್ತು. ಜೊತೆಗೆ ಆವರಣದ ತುಂಬೆಲ್ಲಾ ಕೊರೊನಾ ಜಾಗೃತಿ ಕುರಿತ ಸಂದೇಶಗಳ ಫಲಕಗಳನ್ನು ಹಾಕಲಾಗಿತ್ತು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಪರೀಕ್ಷೆಯನ್ನು ಎದುರಿಸುವಂತೆ ವಿದ್ಯಾರ್ಥಿಗಳಿಗೆ ಅಧಿಕಾರಿಗಳು, ಶಿಕ್ಷಕರು ಆತ್ಮ ಸ್ಥೈರ್ಯವನ್ನು ತುಂಬಿದರು. ಅಧಿಕಾರಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಪರೀಕ್ಷೆಯನ್ನು ಚೆನ್ನಾಗಿ ಬರೆಯುವಂತೆ ಪ್ರೋತ್ಸಾಹಿಸಿದರು.

ಆವರಣ ಪ್ರವೇಶದಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ ಮಾಡಿದರು. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕಕ್ಕೆ ಮಹಿಳಾ ಗವರ್ನರ್: ನೂತನ ರಾಜ್ಯಪಾಲ ಡಾ ಸುಧಾ ಯಾದವ್ ಯಾರು ಗೊತ್ತಾ

ಸಿದ್ದರಾಮಯ್ಯ ವಿರುದ್ಧ ಸ್ಟಿಂಜ್ ಆಪರೇಷನ್ ಮಾಡಿದವರು ಯಾರು: ಸ್ಪೋಟಕ ಮಾಹಿತಿ ನೀಡಿದ ಕೆಎನ್ ರಾಜಣ್ಣ

ಹೆಣ್ಣೋ ಹೆಮ್ಮಾರಿಯೋ.. ರಸ್ತೆಯಲ್ಲೇ ಮಗುವಿಗೆ ದನಕ್ಕೆ ಹೊಡೆದಂಗೆ ಹೊಡೆದಳು video

ದೇವರ ಮುಂದೆಯೇ ಅಪ್ರಾಪ್ತ ಬಾಲಕಿಯನ್ನು ತಬ್ಬಿ… ಛೀ ಇದೆಂಥಾ ದೌರ್ಜನ್ಯ Video

ನೀವು ಹೋಗ್ತಾ ಇರಿ, ನಾವು ಬೇರೆಯವರನ್ನು ಹುಡುಕಿಕೊಳ್ತೀವಿ: ಸಿಜೆಐ ಸೂರ್ಯಕಾಂತ್ ಗೆ ಕೇರಳ ಕಾಂಗ್ರೆಸ್ ಇದೆಂಥಾ ಮಾತು video

ಮುಂದಿನ ಸುದ್ದಿ
Show comments