Publish Date: Thu, 25 Jun 2020 (10:30 IST)
Updated Date: Thu, 25 Jun 2020 (11:07 IST)
ಬೆಂಗಳೂರು: ಇಂದಿನಿಂದ ಆರಂಭವಾಗುತ್ತಿರುವ ಕರ್ನಾಟಕ ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಯಾಂಡಲ್ ವುಡ್ ತಾರೆಯರು ಶುಭ ಹಾರೈಸಿದ್ದಾರೆ.
ಕೊರೋನಾ ಭೀತಿಯ ನಡುವೆ ಇಷ್ಟು ದಿನ ಮುಂದೂಡಿಕೆಯಾಗಿದ್ದ ಎಸ್ಎಸ್ಎಲ್ ಸಿ ಪರೀಕ್ಷೆ ಕೊನೆಗೂ ಇಂದಿನಿಂದ ಆರಂಭವಾಗುತ್ತಿದ್ದು, ಭಾರೀ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಜೀವನದ ಮಹತ್ವದ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ನವರಸನಾಯಕ ಜಗ್ಗೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಸಿಂಪಲ್ ಸುನಿ, ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ ಸೇರಿದಂತೆ ತಾರೆಯರೂ ಮಕ್ಕಳಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.