Publish Date: Wed, 24 Jun 2020 (10:30 IST)
Updated Date: Wed, 24 Jun 2020 (10:32 IST)
ಅಹಮ್ಮದಾಬಾದ್: ಆನ್ ಲೈನ್ ತರಗತಿಯಿಂದಾಗಿ ಮಾನಸಿಕ ಒತ್ತಡ ತಾಳಲಾರದೇ ಗುಜರಾತ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಜ್ ಕೋಟ್ ನಿವಾಸಿಯಾಗಿದ್ದ 12 ವರ್ಷ ಬಾಲಕಿ 8 ನೇ ತರಗತಿ ಓದುತ್ತಿದ್ದಳು. ಲಾಕ್ ಡೌನ್ ಕಾರಣದಿಂದಾಗಿ ಅವಳ ಶಾಲೆಯವರು ಈಗ ಆನ್ ಲೈನ್ ತರಗತಿ ನಡೆಸುತ್ತಿದ್ದಾರೆ. ಇದಕ್ಕಾಗಿ ಆಕೆಯ ಬಡ ವ್ಯಾಪಾರಿ ತಂದೆ ಇತ್ತೀಚೆಗಷ್ಟೇ ಸಾಲ ಮಾಡಿ 10 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಒಂದನ್ನು ಖರೀದಿಸಿದ್ದರು ಎನ್ನಲಾಗಿದೆ.
ಇದೀಗ ಆನ್ ಲೈನ್ ತರಗತಿಯಲ್ಲಿ ನೀಡುವ ಹೋಂ ವರ್ಕ್ ನಿಭಾಯಿಸಲಾಗದೇ ಮಾನಸಿಕ ಒತ್ತಡಕ್ಕೊಳಗಾದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.