Publish Date: Tue, 14 Apr 2026 (19:24 IST)
Updated Date: Tue, 14 Apr 2026 (19:37 IST)
ಮಂಡ್ಯ ಜಿಲ್ಲೆ: ಮಂಗಳವಾರ ಪಟ್ಟಣದಲ್ಲಿ ಮುತ್ತು ಮಾರಮ್ಮ ದೇವಿಯ ಕರಗದ ನಿಮಿತ್ತ ನಡೆದ ಕೊಂಡೋತ್ಸವದ ವೇಳೆ ದೇವರ ಗುಡ್ಡಪ್ಪ ಬೆಂಕಿ ಕೆಂಡದ ಮೇಲೆ ಬಿದ್ದು ಮೂವರು ಗಾಯಗೊಂಡಿದ್ದಾರೆ. ಇನ್ನೂ ಅವರನ್ನು ರಕ್ಷಿಸಲು ಮುಂದಾದ ಮೂವರು ಸಹೋದರಿ ಕೂಡ ಗಾಯಗೊಂಡರು.
ಬೆಂಕಿಯ ಕೊಂಡ ಹಾಯಲು ಮುಂದಾದ ಮುತ್ತು ಮಾರಮ್ಮನ ಗುಡ್ಡಪ್ಪ ಬಿ. ಕುಮಾರ್ ಆಯತಪ್ಪಿ ಬಿದ್ದರು. ಕರಗ ಹೊತ್ತು ಏಳೆಂಟು ಹೆಜ್ಜೆ ಹಾಕಿದ್ದ ಬಿ. ಕುಮಾರ್ ಅವರ ಕಾಲಿಗೆ ಪಂಚೆ ಸಿಕ್ಕಿಕೊಂಡು ಮುಗ್ಗರಿಸಿ ಮಕಾಡೆ ಬಿದ್ದರು. ಮುತ್ತು ಮಾರಮ್ಮನ ಕರಗ ಅವರ ತಲೆಯ ಮೇಲಿಂದ ಕಳಚಿ ಕೆಂಡದ ಮೇಲೆ ಬಿತ್ತು.
ಕೊಂಡದಲ್ಲಿ ಬಿದ್ದ ಕುಮಾರ್ ಅವರನ್ನು ರಕ್ಷಿಸಲು ಅವರ ಸಹೋದರಿ ರಾಜೇಶ್ವರಿ ಕೊಂಡಕ್ಕೆ ಜಿಗಿದರು. ಪಕ್ಕದಲ್ಲಿದ್ದವರು ತಕ್ಷಣ ಇಬ್ಬರನ್ನೂ ಕೊಂಡದಿಂದ ಮೇಲೆ ಎತ್ತಿದರು.
ಘಟನೆಯಲ್ಲಿ ಕುಮಾರ್ ಅವರ ಕೈ ಮತ್ತು ಕಾಲುಗಳು ಹಾಗೂ ರಾಜೇಶ್ವರಿ ಅವರ ಕಾಲುಗಳು ಭಾಗಶಃ ಸುಟ್ಟಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರೆಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ.