ಪುಲ್ವಾಮಾ ದಾಳಿಯ ಬಗ್ಗೆ ನಿಮ್ಮಣ್ಣ ರೇವಣ್ಣ ಭವಿಷ್ಯ ಹೇಳಿದ್ದರಾ?-ಸಿಎಂ ಗೆ ಶ್ರೀನಿವಾಸಪೂಜಾರಿ ವ್ಯಂಗ್ಯ

Webdunia
ಶನಿವಾರ, 6 ಏಪ್ರಿಲ್ 2019 (10:23 IST)
ಉಡುಪಿ : ಪುಲ್ವಾಮಾ ದಾಳಿಯ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕ ಶ್ರೀನಿವಾಸಪೂಜಾರಿ ಅವರು ವ್ಯಂಗ್ಯವಾಡುವುದರ ಮೂಲಕ ತಿರುಗೇಟು ನೀಡಿದ್ದಾರೆ.


ಭಾರತ, ಪಾಕ್ ನಡುವಿನ ಸಂಘರ್ಷದ ಬಗ್ಗೆ 2 ವರ್ಷದ ಹಿಂದೆಯೇ ತಿಳಿದಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸಪೂಜಾರಿ, ಸಿಎಂ ಕುಮಾರಸ್ವಾಮಿ ಅವರು ನೀಚ ಚಟುವಟಿಕೆ ಮಾಡುತ್ತಿದ್ದಾರೆ. ನಿಮ್ಮಣ್ಣ ರೇವಣ್ಣ ಪಾಕ್ ಸಂಘರ್ಷದ ಬಗ್ಗೆ ಭವಿಷ್ಯ ಹೇಳಿದ್ದರಾ? ಎಡಗೈಯಲ್ಲಿ ನಾಲ್ಕು, ಬಲಗೈಯಲ್ಲಿ ನಾಲ್ಕು ನಿಂಬೆ ಹಣ್ಣು ಹಿಡಿದುಕೊಂಡು ಭವಿಷ್ಯ ಹೇಳಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.


ಪುಲ್ವಾಮಾ ಘಟನೆ ಬಗ್ಗೆ ಮೊದಲೇ ಗೊತ್ತಿದ್ದರೆ ಸಿಎಂ ಎರಡು ವರ್ಷದ ಹಿಂದೇನೆ ಹೇಳಬೇಕಿತ್ತು. ಈಗ ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ಎಂದು ಕಿಡಿಕಾರಿದ್ದಾರೆ.


ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯದಲ್ಲಿ ತಮ್ಮ ಮಗ ಗೆಲ್ಲುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿಗೆ ಗೊತ್ತಾಗಿದೆ. ತುಮಕೂರು,ಹಾಸನ ಗೆಲುವು ಕೂಡ ಕಷ್ಟವಿದೆ ಎಂದು ಅವರಿಗೆ ಅವರಿವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ನಾಲಾಯಕ್ ಹೋಂ ಮಿನಿಸ್ಟರ್ ಎಂದ ಪ್ರಿಯಾಂಕಾ ಖರ್ಗೆ ವಿರುದ್ಧ ಬಿಜೆಪಿ ಗರಂ

ಬಿಜೆಪಿ ವಿಷಕಾರಿ ಕೆಮ್ಮಿನ ಸಿರಪ್ ಹಂಚಿದೆ: ಮುಖೇಶ್ ವರ್ಮಾ

ಶಬರಿಮಲೆ ಚಿನ್ನ ಕಳವು ಪ್ರಕರಣ, ಬಳ್ಳಾರಿಯ ಒಬ್ಬರು ಸೇರಿ ಇಬ್ಬರು ಅರೆಸ್ಟ್‌

ರೌಡಿ ಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣ, ಶಾಸಕ ಬೈರತಿ ಬಸವರಾಜ್‌ಗೆ ಬಿಗ್ ಟೆನ್ಷನ್‌

ಮಲೆನಾಡಿನ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಹೆಚ್ಚಳ, ಇದು ಹೇಗೆ ಹರಡುತ್ತದೆ ಗೊತ್ತಾ

ಮುಂದಿನ ಸುದ್ದಿ
Show comments