ಪಂಚರತ್ನದ ಮೂಲಕ ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.ಈ ನಡುವೆ ಜೆಡಿಎಸ್ ಶಾಸಕರಾಗಿದ್ದ ಗುಬ್ಬಿ ಕ್ಷೇತ್ರದ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಗೆ ಹೊಡೆತ ಕೊಟ್ಟಿದೆ.ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ವೇಳೆ ಮೂಡಗೇರಿ ಕ್ಷೇತ್ರದ ಬಿಜೆಪಿ ನಾಯಕ ಕಾಂಗ್ರೆಸ್ ಸೇರಲು ಬಂದಿದ್ದಾರೆ.ಮಂಡ್ಯ ವಕೀಲ ಸತ್ಯನಂದ ಕೂಡಾ ಕಾಂಗ್ರೆಸ್ ಗೆ ಸೇರ್ಪಡೆ ಆದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸಿದ್ದರಾಮಯ್ಯ ಮಾತನಾಡಿ ಶ್ರೀನಿವಾಸ್ ಗೌಡರರಿಗೆ ಹಲವು ಭಾರಿ ಗಾಳ ಹಾಕ್ತಾಯಿದ್ವಿ ಗಾಳಕ್ಕೆ ಬಿದ್ದರಿಲಿಲ್ಲ ಈಗ ನನ್ನ, ಸಿದ್ದರಾಮಯ್ಯ ಗಾಳಕ್ಕೆ ಬಿಳಲಿಲ್ಲ.ಮತದಾರರ ಗಾಳಿ ಬಿಸಿದ ಕಡೆ ರಾಷ್ಟ್ರೀಯ ಪಕ್ಷಕ್ಕೆ ಬಂದಿದ್ದಾರೆ. ಶ್ರೀನಿವಾಸ್ ಅವರು ಬಂದಿದ್ದರಿಂದ ತುಮಕೂರು ಜೆಲ್ಲೆ ಕಾಂಗ್ರೆಸ್ ಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.