Publish Date: Fri, 07 Dec 2018 (14:40 IST)
Updated Date: Fri, 07 Dec 2018 (14:42 IST)
ಶೃಂಗೇರಿ ಶಾರದಾಂಬೆ ದರ್ಶನವನ್ನು ಮುಖ್ಯಮಂತ್ರಿ ಪಡೆದುಕೊಂಡಿದ್ದಾರೆ.
ಶ್ರೀ ಮಠಕ್ಕೆ ತೆರಳಿ ಶೃಂಗೇರಿ ಜಗದ್ಗುರುಗಳನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದರು. ಶೃಂಗೇರಿ ಜಗದ್ಗುರು ಭಾರತಿತೀರ್ಥ ಸ್ವಾಮೀಜಿ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಆ ಬಳಿಕ ಶೃಂಗೇರಿಯಲ್ಲಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಶಾರದೆಯ ದರ್ಶನ ಪಡೆದು, ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ವಿಶೇಷ ಪೂಜೆ ಏನೂ ಸಲ್ಲಿಸುತ್ತಿಲ್ಲ. ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಶೃಂಗೇರಿ ಕ್ಷೇತ್ರಕೂ ನಮ್ಮ ಕುಟುಂಬಕ್ಕೂ ಉತ್ತಮ ಸಂಬಂಧವಿದೆ. ಶಾರದೆಯ ದರ್ಶನ ಪಡೆದು ಗುರುಗಳ ಆಶೀರ್ವಾದ ಪಡೆದರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕಂಪ್ಲಿ ಶಾಸಕ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ್ದು,
ಯಾರು ಏನಾದ್ರು ಹೇಳಿಕೆ ಕೊಡಲು ಸ್ವಾತಂತ್ರ್ಯಇದೆ. ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.