Webdunia - Bharat's app for daily news and videos

Install App

ಅಜ್ಞಾತ ಸ್ಥಳದಲ್ಲಿ ನೆಡೆಯುತ್ತಿರುವ ಶ್ರೀಕಿ ವಿಷ್ಣುಭಟ್ ವಿಚಾರಣೆ

Webdunia
ಭಾನುವಾರ, 7 ನವೆಂಬರ್ 2021 (20:56 IST)
ಬೆಂಗಳೂರು : ಫೈವ್ ಸ್ಟಾರ್ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಹ್ಯಾಕರ್ ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣುಭಟ್ ನನ್ನ ಅರೆಸ್ಟ್ ಮಾಡಿರುವ  ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇಬ್ಬರನ್ನು ಇಟ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಗಲಾಟೆಯ ವೇಳೆ ಮಧ್ಯ ಸೇವಿಸಿರೋದು ದೃಢ ಪಟ್ಟಿದ್ದು, ಹ್ಯಾಕರ್ ಶ್ರೀಕೃಷ್ಣ ಮತ್ತು ವಿಷ್ಣು ಭಟ್ ಇಬ್ಬರಿಗೂ ಮಾದಕವಸ್ತು ಸೇವನೆ ಪರೀಕ್ಷೆ ಮಾಡಿಸಲಾಗಿದೆ. ಈ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣುಭಟ್‌ ಇಬ್ಬರನ್ನು ಪ್ರತ್ಯೇಕವಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನೆಡೆಸುತ್ತಿದ್ದಾರೆ. ಶ್ರೀಕೃಷ್ಣನನ್ನು ಭೇಟಿಯಾಗಲಿಕ್ಕೆ ವಿಷ್ಣುಭಟ್ ಬಂದಿದ್ದು ಯಾಕೆ ಎಂದು ತನಿಖೆ ನೆಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
 
ಎರಡೂವರೆ ತಿಂಗಳಿಂದ ರಾಯಲ್ ಆರ್ಕೆಡ್ ಹೋಟೆಲ್ ನಲ್ಲಿದ್ದ ಶ್ರೀಕೃಷ್ಣ ಹೋಟೆಲ್ ಬಿಲ್ ಕೂಡ ಜ್ಯುವೆಲ್ಲರ್ಸ್ ನ ಮಾಲೀಕನ ಪುತ್ರ ವಿಷ್ಣುಭಟ್ ಫಂಡಿಂಗ ಮಾಡಿದ್ದಾನೆ ಇದಕ್ಕೆ ಕಾರಣವನ್ನು ತನಿಖೆಯಿಂದ ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. 
 
ಹಲವು ಆಯಾಮಗಳಲ್ಲಿ ವಿಚಾರಣೆ: 
 
ಶ್ರೀಕೃಷ್ಣ ತಂಗಿದ್ದ ಹೋಟೆಲ್ ರೂಂ ತಪಾಸಣೆ ನಡೆಸಿದ್ದ ಪೊಲೀಸರು ನಾಲ್ಕು ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದಾರೆ. ಶ್ರೀಕಿ ಈ ಹಿಂದೆ ಸಿಸಿಬಿಯಿಂದ ಅರೆಸ್ಟ್ಆದಾಗ ಹಲವು ಸ್ಫೋಟಕ ವಿಚಾರಗಳು ಹೊರಬಂದಿದ್ದವು. ಈಗಲೂ ಸಹ ಹಲವು ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
 
ಬಿಟ್ ಕಾಯಿನ್ ಹಾಗೂ ಡಾರ್ಕ್ ವೆಬ್ ಸೈಟ್ ಬಳಸುವ ಕುರಿತು ಶ್ರೀಕಿ ಮಾಸ್ಟರ್ ಮೈಂಡ್ ಆಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಹ್ಯಾಕ್ ಮಾಡುತ್ತಿದ್ದನಾ ಅಥವಾ ಬಿಟ್ ಕಾಯಿನ್ ಹಗರಣ ನೆಡೆಸುತ್ತಿದ್ದಾನಾ ಎನ್ನುವುದರ ಕುರಿತು ಸಮಗ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
 
ನಂಟುಹೊಂದಿರುವ ರಾಜಕಾರಣಿಗಳ  ಮಕ್ಕಳಿಗೆ ಕಂಟಕ: 
 
ಇತ್ತ ಶ್ರೀಕಿ ಅರೆಸ್ಟ್ ಆಗುತ್ತಿದ್ದಂತೆ ಈತನ ನಂಟು ಹೊಂದಿದ್ದ ಹತ್ತು ಹಲವಾರು ಜನರಿಗೆ ನಡುಕ ಆರಂಭವಾಗಿದೆ. ಅನೇಕ ರಾಜಕಾರಣಿಗಳ ಮಕ್ಕಳು, ವ್ಯಾಪಾರಸ್ಥರ ಮಕ್ಕಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತ ಯಾರ ಜತೆ ಯಾವ ವ್ಯವಹಾರ ನಡೆಸಿದ್ದಾನೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಾಗುತ್ತಿದೆ.
 
ಎರಡೂವರೆ ತಿಂಗಳಿನಿಂದ ರಾಯಲ್ ಆರ್ಕೆಡ್ ಹೋಟೆಲ್ ನಲ್ಲಿ  ಶ್ರೀಕಿ:  
 
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಕಳೆದ ಎರಡೂವರೆ ತಿಂಗಳಿನಿಂದ ಶ್ರೀಕಿ ರಾಯಲ್ ಆರ್ಕೆಡ್ ಹೋಟೆಲ್ ನಲ್ಲಿ ತಂಗಿದ್ದ. ಶ್ರೀಕೃಷ್ಣನ ಭೇಟಿಗಾಗಿ ಶನಿವಾರ ಭೀಮಾ ಜ್ಯುವೆಲ್ಲರ್ಸ್ ನ ವಿಷ್ಣು ಭಟ್ ಬಂದಿದ್ದ. ಈ ವೇಳೆ ಹೋಟೆಲ್ ನಲ್ಲಿದ್ದ ಡ್ಯೂಟಿ ಮ್ಯಾನೇಜರ್ ಮೇಲೆ ವಿಷ್ಣುಭಟ್ ಹಾಗೂ ಶ್ರೀಕಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಜೀವನ ಭೀಮಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 348,323 ರ ಅಡಿ ಎಫ್.ಐ.ಆರ್ ದಾಖಲಾಗಿದೆ.
sriki

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments