Select Your Language

Notifications

webdunia
webdunia
webdunia
webdunia

ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣ- ದೆಹಲಿಯಲ್ಲಿ ಪ್ರತಿಭಟನೆಯ ಎಚ್ಚರಿಕೆ

ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣ- ದೆಹಲಿಯಲ್ಲಿ ಪ್ರತಿಭಟನೆಯ ಎಚ್ಚರಿಕೆ
bangalore , ಶನಿವಾರ, 9 ಜುಲೈ 2022 (19:29 IST)
bank
ಬೆಂಗಳೂರು : ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಕೋಟ್ಯಂತರ ರೂಪಾಯಿ ಹಗರಣ ಬೆಳಕಿಗೆ ಬಂದು ಎರಡುವರೆ ವರ್ಷ ಆಯ್ತು. ಈ ಹಗರಣದ ಬಗ್ಗೆ ಸರ್ಕಾರ ಇನ್ನೂ ಕೂಡ ವಂಚನೆಗೊಳಾಗದ ಠೇವಣಿದಾರರು ಮತ್ತು ಷೇರುದಾರರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ತೆಗೆದುಕೊಂಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಿಲ್ಲ. ಹೀಗಾಗಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮುಂದಿನ ಸಂಸತ್ ಅಧಿವೇಶನದ ವೇಳೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾಪೋಷಕರಾದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ತಿಳಿಸಿದ್ದಾರೆ
 
ಬೆಂಗಳೂರಿನ ಬಸವನಗುಡಿಯ ಅಭಿನವ ವಿದ್ಯಾ ವಿಹಾರ ಸಭಾಂಗಣದಲ್ಲಿ ಮುಂದಿನ ಹೋರಾಟದ ಬಗ್ಗೆ ಚಿಂತನ ಮಂಥನ ಸಭೆ ನಡೆಯಿತ್ತು. 
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು,  ವಂಚನೆಗೊಳಾದ ನೂರಾರು ಮಂದಿ ಈ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದರು. 
 
ವಂಚನೆಗೊಳಾಗದ ಎಲ್ಲಾ ಸಹಕಾರ ಸೌಹಾರ್ದ ಬ್ಯಾಂಕ್ ಗಳ ಮಹಾ ಒಕ್ಕೂಟವನ್ನು ರಚಿಸಲು ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ವಂಚನೆಗೊಳಾಗದವರಿಗೆÉ ಪರಿಹಾರವನ್ನು ನೀಡಬೇಕು ಎಂದು ಮುಂಬರುವ ಅಧಿವೇಶನದ ವೇಳೆ ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಹೇಳಿದ್ರು. 
 
ಅಂದಹಾಗೆ ಈ ಬ್ಯಾಂಕ್ ಗೆ ಸಂಬಂಧಿಸಿದಂತೆ  ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಮೇಲೆ ಏನು ಕ್ರಮ  ತೆಗೆದುಕೊಂಡಿಲ್ಲ. ವಂಚನೆ ಮಾಡಿದವರೆಲ್ಲಾ ಐಷಾರಾಮಿ ಕಾರಲ್ಲಿ ಓಡಾಡುತ್ತಾ ಇದ್ದಾರೆ. ವಂಚನೆಗೊಳಾಗದವರ ಬದುಕು ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. 
 
ಈ ಕುರಿತಂತೆ ರಾಜ್ಯದ ಎಲ್ಲಾ ಸಂಸದರ ಜೊತೆಗೂ ಮಾತುಕತೆ ನಡೆಸುತ್ತೇವೆ. ಅವರನ್ನು ಜೊತೆ ಸೇರಿಸಿಕೊಂಡು ನೊಂದವರಿಗೆ ಪರಿಹಾರ ಸಿಗುವಂತೆ ಕೇಳಿಕೊಳ್ಳುತ್ತೇವೆ. ಒಂದು ವೇಳೆ ನಮಗೆ ಸೂಕ್ತ ಪರಿಹಾರ ಸಿಗಲಿಲ್ಲ ಅಂದರೇ ಉಪವಾಸ ಸತ್ಯಾಗೃಹ   ಮಾಡುತ್ತೇವೆ ಎಂದು ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಎಚ್ಚರಿಕೆ ನೀಡಿದರು.
 
ಇನ್ನು ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರ ಶೇಖರ್, ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಬಾರಿ ಸಂಸತ್‍ನಲ್ಲಿ ಧ್ವನಿ ಎತ್ತಿದ್ದೇನೆ. ಎರಡು ವರ್ಷದ ಹಿಂದೆ ನಾನು ಈ ಬಗ್ಗೆ ಪ್ರಶ್ನಿಸಿದ್ದೆ. ಆ ಸಮಯದಲ್ಲಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು 
 
ಮುಂಬರುವ ಮುಂಗಾರು ಅಧಿವೇಶನದಲ್ಲಿ ಏನು ಕೇಳಬೇಕು, ಹಣ ಹಿಂಪಡೆಯಬೇಕಾದ ದಾರಿಗಳೇನು ಎನ್ನುವುದರ ಬಗ್ಗೆ ನನಗೆ ಸಲಹೆ ನೀಡಿದೆ. ನಿಮ್ಮ ಅಮೂಲ್ಯ ಸಲಹೆಗಳನ್ನು ನಾನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಜಿ.ಸಿ. ಚಂದ್ರ ಶೇಖರ್ ಭರವಸೆ ನೀಡಿದ್ರು. 
 
ಇಲ್ಲಿ ಯಾವುದೇ ರಾಜಕೀಯವಾಗಲಿ ಸ್ವಪ್ರತಿಷ್ಠೆಯಾಗಲಿ ಬೇಕಾಗಿಲ್ಲ. ಯಾವುದೇ ರೀತಿಯ  ಕ್ರೆಡಿಟ್ ಕೂಡ ನನಗೆ ಬೇಕಾಗಿಲ್ಲ. ವಂಚನೆಗೊಳಾಗದವರಿಗೆ  ಹಣ ಕೊಡಿಸುವ ವಿಚಾರದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಹೋರಾಡಬೇಕಿದೆ. ಈ ವಿಚಾರದಲ್ಲಿ ರಾಜಕೀಯ ತಂದರೆ ಹಣ ಕೊಡಿಸುವ ವಿಚಾರ ಹಿಂದಕ್ಕೆ ಬೀಳಲಿದೆ.
ಮುಳ್ಳಿನ ಮೇಲೆ ಬಟ್ಟೆ ಬಿದ್ದಿದೆ ಅದನ್ನು ಹರಿಯದಂತೆ ಎತ್ತಿಕೊಳ್ಳುವ ಜಾಣ್ಮೆ ಪ್ರದರ್ಶಿಸಬೇಕಿದೆ ಎಂದರು. 
 
ಈ ಚಿಂತನ - ಮಂಥನ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ನಿವೃತ್ತ ನಿವೃತ್ತ ಆಂಬಡ್ಸ್ಮಯಾನ್ ಪಳನಿ ಸ್ವಾಮಿ ಉಪಸ್ಥಿತರಿದ್ದರು.  ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಬ್ಯಾಂಕ್, ಕಣ್ವ ಸೌಹಾರ್ದ ಸಹಕಾರ ಬ್ಯಾಂಕ್, ಬೆಳ್ಳಿ - ಬೆಳಕು ಸೌಹಾರ್ದ ಸಹಕಾರ ಬ್ಯಾಂಕ್, ಸಿರಿ -ವೈಭವ ಸಹಕಾರ ಬ್ಯಾಂಕ್, ವಸಿಷ್ಟ ಸೌಹಾರ್ದ ಸಹಕಾರ ಬ್ಯಾಂಕ್, ಶ್ರೀ ಶೈಲಗಿರಿ ಸೌಹಾರ್ದ ಬ್ಯಾಂಕ್ ನಲ್ಲಿ ವಂಚನೆಗೊಳಾಗದ ನೂರಾರು ಠೇವಣಿದಾರರು, ಷೇರುದಾರರು ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಮಸ್ಯೆ