Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ಗೆ ಜಾತಿ ಬಣ್ಣ ಹಚ್ಚೋದ್ಯಾಕೆ? ಎಂದ ಸಿದ್ದರಾಮಯ್ಯ

ಕೊರೊನಾ ವೈರಸ್ ಗೆ ಜಾತಿ ಬಣ್ಣ ಹಚ್ಚೋದ್ಯಾಕೆ? ಎಂದ ಸಿದ್ದರಾಮಯ್ಯ
ಬೆಂಗಳೂರು , ಬುಧವಾರ, 1 ಏಪ್ರಿಲ್ 2020 (14:19 IST)
ಕೊರನಾ ವೈರಸ್ ಯಾವುದೇ ಜಾತಿ, ಧರ್ಮ ಇಲ್ಲದೇ ಜನರಿಗೆ ತಗಲುತ್ತದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯ ಹೇಳಿದ್ದು, ಇದಕ್ಕೆ ಧರ್ಮದ ಬಣ್ಣ ಹಚ್ಚಬೇಡಿ ಎಂದು ಗರಂ ಆಗಿದ್ದಾರೆ.

ಕೊರೊನಾ ವೈರಸ್ ಹರಡುತ್ತಿರುವ ಅಪಾಯಕಾರಿ ಸನ್ನಿವೇಶದಲ್ಲಿ ಜಾತಿ, ಧರ್ಮದ ಬಣ್ಣ ಹಚ್ಚುವ ಯತ್ನ ನಡೆಯುತ್ತಿರೋದು ಸರಿಯಲ್ಲ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇನ್ನು ಕೊರೊನಾ ವಿರುದ್ಧ ಸಮರ್ಪಕವಾಗಿ ಹೋರಾಟ ನಡೆಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ದೂರಿದ್ದಾರೆ.

ಕಾಂಗ್ರೆಸ್ ನ ಶಾಸಕರು ಹಾಗೂ ಸಂಸದರು ಕೋವಿಡ್ – 19 ವಿರುದ್ಧದ ಹೋರಾಟಕ್ಕೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ಧನ ನೀಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ 7 ರಿಂದ 11 ರವರೆಗೆ ಮಾತ್ರ ಮನೆಯಿಂದ ಹೊರಬನ್ನಿ