Publish Date: Wed, 01 Apr 2020 (13:02 IST)
Updated Date: Wed, 01 Apr 2020 (13:03 IST)
ಗಣಿನಾಡು ಬಳ್ಳಾರಿ ಜಿಲ್ಲೆಯ ಒಂದೇ ಮನೆಯಲ್ಲಿ ಮೂವರು ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಹೊಸಪೇಟೆ ನಗರದ ನಿವಾಸಿಗಳಾದ ಒಂದೇ ಕುಟುಂಬದ ಮೂವರಲ್ಲಿ ಕೋವಿಡ್ – 19 ಲಕ್ಷಣಗಳು ಇರೋದು ದೃಢಪಟ್ಟಿದೆ.
ಬಳ್ಳಾರಿಯ ವಿಮ್ಸ್ ನಲ್ಲಿ ಇವರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂರು ಜನರಲ್ಲಿಯೂ ಸೋಂಕು ಕಂಡು ಬಂದಿದೆ ಎಂದು ಡಿಸಿ ಎಸ್.ಎನ್.ನಕುಲ್ ಹೇಳಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಇವರು ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಹೊಸಪೇಟೆಗೆ ಬಂದಿದ್ದರು. ವೈರಸ್ ಪೀಡಿತರ ಮನೆ ಸುತ್ತ ಬಿಗಿ ಭದ್ರತೆ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.