Select Your Language

Notifications

webdunia
webdunia
webdunia
webdunia

ಶೃಂಗೇರಿ ಶಾಸಕ ಜೀವರಾಜ್ ಪ್ರಮಾಣವಚನಕ್ಕೆ ಸ್ಪೀಕರ್ ವಿಳಂಬ: ಬಿಜೆಪಿ ದೂರಿಗೆ ಯುಟಿ ಖಾದರ್ ಪ್ರತಿಕ್ರಿಯೆ

Karnataka BJP
Photo Credit: X
ಬೆಂಗಳೂರು: ಮರು ಮತ ಎಣಿಕೆ ಬಳಿಕ ಶೃಂಗೇರಿ ಶಾಸಕರಾಗಿ ಆಯ್ಕೆಯಾದ ಬಿಜೆಪಿ ಜೀವರಾಜ್ ಪ್ರಮಾಣ ವಚನಕ್ಕೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಿಯೋಗ ದೂರು ಸಲ್ಲಿಸಿದ್ದು, ಈ ಬಗ್ಗೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಕೋರ್ಟ್ ಆದೇಶದ ನಂತರ ನಡೆದ ಮರುಎಣಿಕೆಯಲ್ಲಿ ಜೀವರಾಜ್ ಅವರು ಅಧಿಕೃತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಮಾಣ ವಚನ ನೀಡುವಲ್ಲಿ ನಿರಂತರ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಕುರಿತು ಸ್ಪೀಕರ್ ಅವರನ್ನು ಸಂಪರ್ಕಿಸಿದಾಗ “ನಾಳೆ, ನಾಡಿದ್ದು” ಎನ್ನುವ ಉತ್ತರ ನೀಡುತ್ತಾ, ಕಾನೂನು ಸಲಹೆ ಪಡೆಯಬೇಕೆಂದು ಹೇಳುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಯುಟಿ ಖಾದರ್ ನಾನು ಯಾವುದೇ ತಡ ಮಾಡಿಲ್ಲ. ಸಂವಿಧಾನದ ಚೌಕಟ್ಟಿನಡಿಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ನಿನ್ನೆಯಷ್ಟೇ ನನ್ನ ಬಳಿ ಸಮಯ ಕೋರಿದ್ದಾರೆ. ಕಾನೂನು ಸಲಹೆ ಪಡೆದು ಕೊಡ್ತೇನೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈಲು ಟ್ರ್ಯಾಕ್ ದಾಟುವ ಭರದಲ್ಲಿ ರೈಲಿನಡಿಗೆ ಸಿಲುಕಿ ನಜ್ಜುಗುಜ್ಜಾದ ಮಹಿಳೆಯರು: ಭೀಕರ video