Select Your Language

Notifications

webdunia
webdunia
webdunia
webdunia

ಕೇಂದ್ರದ ವಿರುದ್ಧ ಸಿದ್ದು ಕಿಡಿ

Spark against the center
bangalore , ಸೋಮವಾರ, 11 ಜುಲೈ 2022 (21:32 IST)
ಕೇಂದ್ರ ಸರ್ಕಾರ ಅಗ್ನಿಪಥ್​ ಯೋಜನೆ ವಿರೋಧಿಸಿ ಕೇಂದ್ರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಯುವಕರು 17 ವರ್ಷಕ್ಕೆ ಕೆಲಸಕ್ಕೆ ಸೇರಬೇಕು, ನಾಲ್ಕು ವರ್ಷದ ನಂತರ ವಾಪಸ್​ ಬರಬೇಕು ಅಂತಾರೆ. ಮತ್ತೆ ಅವರನ್ನ ನಿರುದ್ಯೋಗಿಗಳಾಗಿ ಮಾಡೋದು ಆ ನಂತರ ಅವರು ಜೀವನವನ್ನ ಹೇಗೆ ನಡೆಸಬೇಕು ಎಂದು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೋದಿ ರೈತರ ಬಗ್ಗೆ ಎಲ್ಲಾದ್ರೂ ಮಾತನಾಡ್ತಾರಾ? ಯುವಕರ ಭವಿಷ್ಯದ ಬಗ್ಗೆ ಮಾತನಾಡ್ತಾರಾ? ಹಿಂದೆ ಯುವಕರು ಮೋದಿ.. ಮೋದಿ ಅಂತಿದ್ರು. ಈಗ ಅದೇ ಯುವಕರಿಗೆ ಎಂಥ ಕೆಟ್ಟ ಪರಿಸ್ಥಿತಿ ತಂದಿಟ್ಟಿದ್ದಾರೆ, ಚೀನಾದಲ್ಲಿ ತಲಾ ಆದಾಯ 12,500 ಸಾವಿರ ಡಾಲರ್​​​​ ಇದೆ. ನಮ್ಮ ದೇಶದಲ್ಲಿ 1850 ಡಾಲರ್ ಇದೆ. ತಲಾ ಆದಾಯ ಹೆಚ್ಚಳ ಮಾಡುವ ಕೆಲಸ ಮಾಡ್ತಿಲ್ಲ. ದೇಶದ ಆರ್ಥಿಕತೆ ಅದೋಗತಿಗೆ ಹೋಗ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಯುವಿನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ