Publish Date: Mon, 03 Oct 2022 (10:46 IST)
Updated Date: Sun, 02 Oct 2022 (22:49 IST)
ಮೈಸೂರು : ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮಡಿಕೇರಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ.
ಇಂದು ಮೈಸೂರಿಗೆ ಆಗಮಿಸುತ್ತಿರುವ ಸೋನಿಯಾ ಗಾಂಧಿ ಅವರು ವಸ್ತು ಪ್ರದರ್ಶನಾ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಮೈಸೂರು ನಗರದಿಂದ ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ನಂತರ ಎಸಿಸಿಸಿ ಅಧ್ಯಕ್ಷ ಚುನಾವಣೆ ಕುರಿತು ಮಗನ ಜೊತೆ ಚರ್ಚೆ ನಡೆಸಲು ಮಡಿಕೇರಿಗೆ ಸೋಮವಾರ ಮಧ್ಯಾಹ್ನ 12.30ಕ್ಕೆ ಬರಲಿದ್ದಾರೆ.
ಸೋನಿಯಾಗಾಂಧಿ ಅವರು ಸೋಮವಾರದ ಯಾತ್ರೆ ಮುಗಿಸಿ ಹೆಲಿಕಾಪ್ಟರ್ನಲ್ಲಿ ಮಡಿಕೇರಿಗೆ ಪ್ರಯಾಣಿಸಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಬೆರಳಣಿಕೆ ತಿಂಗಳು ಉಳಿದಿದೆ.