Daily Horoscope
✕

ತಾಯಿಯ ಫೋನ್ ಬಳಸಿ ಗೂಗಲ್ ಟಿವಿ ಖರೀದಿಸಿದ ಮಗ: ಡೆಲಿವರಿ ಬಂದಾಗ ಅಮ್ಮ ಶಾಕ್, ಮಗನ ರಿಯಾಕ್ಷನ್ Video

ಕೃಷ್ಣವೇಣಿ ಕೆ
ಸೋಮವಾರ, 29 ಜೂನ್ 2026 (11:20 IST)
Photo Credit: X
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗ್ಯಾಜೆಟ್‌ಗಳು ಹಾಗೂ ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್‌ಗಳ ಬಳಕೆ ಅತಿಯಾಗಿಯೇ ಗೊತ್ತು. ಆದರೆ, ಇಲ್ಲೊಬ್ಬ ಪೋರ ತನ್ನ ತಾಯಿಯ ಮೊಬೈಲ್ ಬಳಸಿ ಯಾರಿಗೂ ತಿಳಿಸದೇ ಬರೋಬ್ಬರಿ 65 ಇಂಚಿನ ಬೃಹತ್ 'ಗೂಗಲ್ ಟಿವಿ' (Google TV) ಆರ್ಡರ್ ಮಾಡಿದ್ದಾನೆ! ಮನೆ ಬಾಗಿಲಿಗೆ ಆರ್ಡರ್ ಬಂದಾಗ ವಿಷಯ ತಿಳಿದ ತಾಯಿ, ಡೆಲಿವರಿ ಬಾಯ್ ಎದುರೇ ಮಗನಿಗೆ ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿರುವ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
 
ನಡೆದಿದ್ದೇನು?
ವೈರಲ್ ಆಗಿರುವ ವಿಡಿಯೋ ಪ್ರಕಾರ, ಈ ಇಂಟರ್ನೆಟ್ ಯುಗದ ಬಾಲಕ ಮನೆಯಲ್ಲಿ ದೊಡ್ಡ ಟಿವಿ ನೋಡಬೇಕೆಂಬ ಆಸೆಯಿಂದ ಅಮ್ಮನಿಗೆ ಗೊತ್ತಿಲ್ಲದಂತೆ ಆಕೆಯ ಫೋನ್ ಮೂಲಕ ಆನ್‌ಲೈನ್‌ನಲ್ಲಿ ಟಿವಿ ಆರ್ಡರ್ ಮಾಡಿದ್ದಾನೆ. ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಸಿಬ್ಬಂದಿ ಅಷ್ಟು ದೊಡ್ಡ ಟಿವಿ ಬಾಕ್ಸ್ ಹಿಡಿದು ಮನೆ ಬಾಗಿಲಿಗೆ ಬಂದು ನಿಂತಾಗ ತಾಯಿಗೆ ಶಾಕ್ ಆಗಿದೆ. "ನಾವು ಯಾವುದೇ ಟಿವಿ ಆರ್ಡರ್ ಮಾಡಿಲ್ಲವಲ್ಲ" ಎಂದು ತಾಯಿ ಗಲಿಬಿಲಿಗೊಂಡಾಗ, ಡೆಲಿವರಿ ಬಾಯ್ ಆರ್ಡರ್ ವಿವರಗಳನ್ನು ತೋರಿಸಿದ್ದಾನೆ. ತಕ್ಷಣವೇ ಇದು ತನ್ನ ಮಗನ ಕೈಚಳಕ ಎಂದು ಅರಿತ ತಾಯಿ ಆತನನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
 
ಡೆಲಿವರಿ ಬಾಯ್ ಎದುರೇ ಪಂಚಾಯಿತಿ:
ಟಿವಿ ಬಾಕ್ಸ್ ಪಕ್ಕದಲ್ಲೇ ನಿಂತು ತಾಯಿ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ, ಅತ್ತ ಮಗ ಏನು ಮಾತನಾಡಲಾಗದೆ ತಲೆ ತಗ್ಗಿಸಿ ನಿಂತಿದ್ದಾನೆ. ಈ ಇಡೀ ಸನ್ನಿವೇಶವನ್ನು ಅಲ್ಲಿಯೇ ಇದ್ದ ಡೆಲಿವರಿ ಬಾಯ್ ಮತ್ತು ಕುಟುಂಬದ ಮತ್ತೊಬ್ಬ ಸದಸ್ಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. "ನನ್ನ ಫೋನ್ ತಗೊಂಡು ಇಷ್ಟೊಂದು ದೊಡ್ಡ ಟಿವಿ ಆರ್ಡರ್ ಮಾಡೋಕೆ ನಿನಗೆ ಎಷ್ಟು ಧೈರ್ಯ? ದುಡ್ಡು ಯಾರು ಕೊಡ್ತಾರೆ?" ಎಂದು ತಾಯಿ ಕೇಳುವ ಶೈಲಿ ಹಾಗೂ ಮಗನ ಅಸಹಾಯಕ ಮುಖಭಾವ ವಿಡಿಯೋದ ಹೈಲೈಟ್ ಆಗಿದೆ.
 
ನೆಟ್ಟಿಗರ ಪ್ರತಿಕ್ರಿಯೆ:
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ತರಾವರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಮಗನಿಗೆ ಧೈರ್ಯ ಜಾಸ್ತಿನೇ ಇದೆ, ಆದ್ರೆ ಅಮ್ಮನ ಕೈಯಲ್ಲಿ ಇವತ್ತು ಪೂಜೆ ಗ್ಯಾರಂಟಿ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು "ಮಕ್ಕಳಿಗೆ ಫೋನ್ ಕೊಡುವಾಗ ಜಾಗ್ರತೆಯಾಗಿರಿ, ಇಲ್ಲದಿದ್ದರೆ ಮುಂದಿನ ಬಾರಿ ಕಾರ್ ಡೆಲಿವರಿ ಬಂದರೂ ಆಶ್ಚರ್ಯವಿಲ್ಲ!" ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಆನ್‌ಲೈನ್ ಆಪ್‌ಗಳಿಗೆ ಪಾಸ್‌ವರ್ಡ್ ಇಟ್ಟುಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ.
pic.twitter.com/V7pxpE8Jho

 

— Ghar Ke Kalesh (@gharkekalesh) June 28, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments