Daily Horoscope

Select Your Language

Notifications

webdunia
webdunia
webdunia
webdunia

ಜೂನ್ 30 ರಿಂದ ರಾಜ್ಯದಲ್ಲಿ ಎಸ್ಐಆರ್ ಶುರು: ಈ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ

Karnataka caste census
ಬೆಂಗಳೂರು: ಜೂನ್ 30 ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಶುರುವಾಗಲಿದೆ.  ಅಧಿಕಾರಿಗಳು ಮನೆಗೆ ಬಂದು ದಾಖಲೆಗಳ ಪರಿಶೀಲನೆ ಮಾಡಲಿದ್ದು ಯಾವೆಲ್ಲಾ ದಾಖಲೆಗಳು ನಿಮ್ಮ ಬಳಿಯಿರಬೇಕು ಇಲ್ಲಿದೆ ವಿವರ.
ದ
ಅರ್ಹ ಮತದಾರರನ್ನು ಉಳಿಸಿಕೊಂಡು, ಅನರ್ಹರನ್ನು ಪಟ್ಟಿಯಿಂದ ಅಳಿಸಿ ಹಾಕಲು ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಚುನಾವಣಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೇ ಬಂದು ದಾಖಲೆಗಳ ಪರಿಶೀಲನೆ ಮಾಡಲಿದ್ದಾರೆ. ಈ ವೇಳೆ ಅವರು ನೀಡುವ ಅರ್ಜಿ ಭರ್ತಿ ಮಾಡಿ ಸಹಿ ಮಾಡಿ ಕೊಡಬೇಕಾಗುತ್ತದೆ. ಕಡ್ಡಾಯವಾಗಿ ಅಧಿಕಾರಿಗಳಿಗೆ ನಿಮ್ಮ ವಿವರಗಳನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾವೆಲ್ಲಾ ದಾಖಲೆಗಳು ನಿಮ್ಮ ಬಳಿಯಿರಬೇಕು ಇಲ್ಲಿದೆ ಪಟ್ಟಿ.

ಬೇಕಾಗುವ ದಾಖಲೆಗಳು
-ಕೇಂದ್ರ/ರಾಜ್ಯ ಸರ್ಕಾರ/ಪಿಎಸ್ ಯು ನಿಯಮಿತ ನೌಕರರು ಅಥವಾ ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ
-ಬ್ಯಾಂಕ್, ಸ್ಥಳೀಯ ಪ್ರಾಧಿಕಾರಗಳು, ಅಂಚೆ ಕಛೇರಿ ಮೊದಲಾದ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಅಥವಾ ಪ್ರಮಾಣ ಪತ್ರ.
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರ
-ಪಾಸ್ ಪೋರ್ಟ್
-ಮಾನ್ಯತೆ ಪಡೆದ ಮಂಡಳಿಗಳು/ವಿಶ್ವ ವಿದ್ಯಾಲಯಗಳು ನೀಡಿರುವ ಎಸ್ಎಸ್ಎಸ್ ಎಲ್ ಸಿ/ಶೈಕ್ಷಣಿಕ ಪ್ರಮಾಣ ಪತ್ರ.
-ರಾಜ್ಯದ ಸಕ್ಷಮ ಪ್ರಾಧಿಕಾರಗಳಿಂದ ನೀಡಲಾದ ಖಾಯಂ ನಿವಾಸಿ ಪ್ರಮಾಣಪತ್ರ
-ಅರಣ್ಯ ಹಕ್ಕುಗಳ ಪ್ರಮಾಣ ಪತ್ರ
-ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ/ಎಸ್ ಸಿ/ ಎಸ್ ಟಿ ಅಥವಾ ಯಾವುದೇ ಜಾತಿ ಪ್ರಮಾಣ ಪತ್ರ
-ರಾಷ್ಟ್ರೀಯ ನಾಗರಿಕರ ನೋಂದಣಿ
-ರಾಜ್ಯ ಅಥವಾ ಸ್ಥಳೀಯ ಸರ್ಕಾರದ ಪ್ರಾಧಿಕಾರಗಳಿಂದ ನಿರ್ವಹಿಸಲಾಗಿರುವ ಕುಟುಂಬ ರಿಜಿಸ್ಟರ್
-ಸರ್ಕಾರದಿಂದ ನೀಡಲಾದ ಯಾವುದೇ ಭೂ/ಮನೆ ಹಂಚಿಕೆ ಪ್ರಮಾಣ ಪತ್ರ
-ಆಧಾರ್ ಸಂಬಂಧ, ಭಾರತ ಚುನಾವಣಾ ಆಯೋಗವು ಪತ್ರ ಸಂಖ್ಯೆ 23/2025-ಇಆರ್ ಎಸ್/ನಂ.II ರಲ್ಲಿ ಹೊರಡಿಸಿದ ಸೂಚನೆಗಳು ಅನ್ವಯಿಸುತ್ತದೆ.

ಈ ಎಲ್ಲಾ ದಾಖಲೆಗಳ ಪೈಕಿ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರಗಳಿದ್ದರೂ ಸಾಕಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ನಿನ್ನ ಬಿಟ್ಟು ಹೋದ್ರೆ ಏನು ಮಾಡ್ತೀಯಾ.. ಅಮ್ಮನ ಪ್ರಶ್ನೆಗೆ ಪುಟ್ಟ ಮಗುವಿನ ಉತ್ತರ ಕೇಳಿದ್ರೆ ಕಣ್ಣಂಚು ಒದ್ದೆಯಾಗುತ್ತೆ Video