ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಗುತ್ತಿಗೆದಾರರಿಗೆ ಮಾಧ್ಯಮದ ಬಳಿ ಹೋಗ್ತೇವೆ ಅಂತ ಹೇಳಿದ್ದೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಏಳು ತಿಂಗಳ ಬಾಕಿ ಬರಬೇಕು. ಈಗಾಗಲೇ ಸ್ವಲ್ಪ ಹಣ ಬಿಡುಗಡೆ ಆಗಿದೆ. ಸಿಎಂ ಸಿದ್ದರಾಮಯ್ಯ ಬಳಿ ಹೋಗಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದ್ರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ಅವರು ನಾನು ಬಂದು ಮೂರು ತಿಂಗಳಾಗಿದೆ. ಆದ್ರೆ ನೀವು ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದ್ರು. ಯಾವುದೇ ಕಂಟ್ರಾಕ್ಟರ್ ಇಷ್ಟು ಪರ್ಸೆಂಟೇಜ್ ಕೊಡಿ ಅಂತ ನನ್ನ ಬಳಿ ದೂರು ಹೇಳಿಲ್ಲ. ಯಾರೋ ಕೊಟ್ಟಿರಬಹುದು. ಯಾರೋ ಒಬ್ಬ ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು. ನಾನೂ ನಾಳೆ ತಿಮ್ಮಪ್ಪನ ಬಳಿ ಹೋಗಿ ತೆಂಗಿನಕಾಯಿ ಹೊಡೀತೀನಿ ನಾನು ಹೇಳಿದ್ದೆಲ್ಲಾ ಸುಳ್ಳು ಕ್ಷಮಿಸಿಬಿಡು ಅಂತ. ಆಗ ಆರೋಪ ಮಾಡಿರೋದೆಲ್ಲಾ ಸರಿಯಾಗಿ ಬಿಡುತ್ತಾ ಎಂದು ಹೇಳಿದರು.