ಜಿಂದಾಲ್ ಕಂಪನಿಗೆ ಶಾಸಕ ಸೋಮಶೇಖರ ರೆಡ್ಡಿ ಹತ್ತು ದಿನಗಳ ಡೆಡ್ ಲೈನ್ ಹಾಗೂ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜಿಲ್ಲೆಯ ಭೂಮಿ, ಜಲ, ಸಂಪನ್ಮೂಲ ಸೇರಿದಂತೆ ಸಕಲವನ್ನು ಉಪಯೋಗಿಸಿಕೊಂಡು ಲಾಭಗಳಿಸುತ್ತಿರುವ ಜಿಂದಾಲ್ ಈ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೆರವಿಗೆ ಪರಿಣಾಮಕಾರಿಯಾಗಿ ಧಾವಿಸಬೇಕಿತ್ತು. ಇದುವರೆಗೆ ಕೈಜೋಡಿಸದಿರುವುದು ವಿಷಾದಕರ.
ಜಿಂದಾಲ್ ಕೂಡಲೇ 10 ದಿನದೊಳಗೆ 1 ಸಾವಿರ ಬೆಡ್‍ಗಳ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಬಳ್ಳಾರಿಯಿಂದ ಜಿಂದಾಲ್‍ವರೆಗೆ ಪಾದಯಾತ್ರೆ ನಡೆಸಿ ಕಾರಖಾನೆ ಎದುರು ಪ್ರತಿಭಟನೆಗೆ ಕುಳಿತುಕೊಳ್ಳುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿರುವ ಗಣಿ ಮಾಲೀಕರು ಸಹ ಮುಂದೆ ಬಂದು ಎಲ್ಲರೊಡಗೂಡಿ 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಗಳ ವ್ಯವಸ್ಥೆ ಮಾಡಿಕೊಡಬೇಕು. ಖಾಸಗಿ ಆಸ್ಪತ್ರೆಗಳು ಕೂಡಲೇ ಶೇ.50ರಷ್ಟು ಬೆಡ್‍ಗಳನ್ನು ನೀಡುವುದಕ್ಕೆ ಮುಂದಾಗಬೇಕು ಎಂದಿದ್ದಾರೆ.