Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲೇ ಉಳಿಯುವ ಸುಳಿವು ಕೊಟ್ಟ ಸೋಮಣ್ಣ

ಸೋಮಣ್ಣ
ಬೆಂಗಳೂರು :ನನಗೆ 73 ವರ್ಷ. ಈಗಲೂ ಆರೋಗ್ಯವಾಗಿದ್ದೇನೆ.ಯಾವುದಾದ್ರೂ ಮೂರು ಲೋಕಸಭಾ ಕ್ಷೇತ್ರಕೊಡಿ ಗೆಲ್ಲಿಸಿಕೊಂಡು ಬರ್ತೀನಿ ಅಂದೆ ಎಂದು ಹೇಳಿರುವ ಸೋಮಣ್ಣ,  ಮಗನಿಗೆ ಏನೂ ಕೇಳಿಲ್ಲ.ಈ ಕ್ಷೇತ್ರದಲ್ಲಿ ನನ್ನದೇ ಆದ ಕೊಡುಗೆ ಇದೆ.  ಅನೇಕ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ ಎಂದರು.
 
ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ವಿ. ಸೋಮಣ್ಣ, ಅವರನ್ನು ತುಂಬಾ ಹತ್ತಿರದಿಂದ ನೋಡಿದೆ.ಅವರು ತುಂಬಾ ಒಳ್ಳೆಯ ವ್ಯಕ್ತಿ  ಮಾತನಾಡುವಾಗ ಹೇಳಿಕೆ ಹೇಗೆಂದ್ರೆ ಹಾಗೆ ಕೊಡಬಾರದು ಎಂದರು.

ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್‌  ಪಕ್ಷದ ಕದ ತಟ್ಟಲು ಸಿದ್ದವಾಗಿದ್ದ ಮಾಜಿ ಸಚಿವ ವಿ. ಸೋಮಣ್ಣ  ಬಿಜೆಪಿ ವರಿಷ್ಠರನ್ನು  ಭೇಟಿಯಾಗಿ ಬಂದ ಬಳಿಕ ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಶಕ್ಕೆ ಮೋದಿಯ ಅಗತ್ಯವಿದೆ. ನೀವು ಪಕ್ಷದಲ್ಲಿಯೇ ಇರಬೇಕೆಂದು ವರಿಷ್ಠರು ಮನವಿ ಮಾಡಿರುವುದಾಗಿ ಹೇಳಿರುವ ವಿ. ಸೋಮಣ್ಣ ತಾವು ಬಿಜೆಪಿಯಲ್ಲಿಯೆ ರಾಜಕೀಯ ಮುಂದುವರೆಸುವ ಸುಳಿವು ನೀಡಿದ್ದಾರೆ.
 
ಜೆ.ಪಿ .ನಡ್ಡಾ ಜಿ  ಹಾಗೂ ಅಮಿತ್ ಶಾ  ಭೇಟಿ ರನ್ನು ಭೇಟಿಯಾಗಿ ಅವರ ಅಂತರಾಳದ ಮಾತು ಕೇಳಿದೆ.  ರಾಷ್ಟ್ರಕ್ಕೆ ಮೋದಿ ಅವರ ಅವಶ್ಯಕತೆ ಇದೆ.ಕೆಲಸ ಮಾಡಿ ಮುಂದೆ ತೀರ್ಮಾನ ಮಾಡ್ತೀವಿ ಎಂದು ವರಿಷ್ಠರು ಹೇಳಿದ್ದಾಗಿ ಸೋಮಣ್ಣ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯದ ಮೇಲೆ ಬರೆಯೆಳೆದ ಭಾರತೀಯ ಚಿತ್ರರಂಗ