Publish Date: Thu, 08 Feb 2018 (11:35 IST)
Updated Date: Thu, 08 Feb 2018 (11:38 IST)
ಹಾಸನ : ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿ.ಸೋಮಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಸ್ವಲ್ಪವಾದ್ರೂ ಬುದ್ಧಿ ಇದೆಯಾ? ಇದು ಹುಚ್ಚರ ಸರ್ಕಾರ. ಸಿಎಂ ಗೆ ತಲೆ ಕೆಟ್ಟಿದೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ರಾಜ್ಯದಲ್ಲಿ ಖಳನಾಯಕನಾಗಲು ಹೊರಟಿದ್ದಾರೆ’ ಎಂದು ಹಾಸನದಲ್ಲಿ ಗುರುವಾರ (ಇಂದು ) ಮಾಜಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ