Webdunia - Bharat's app for daily news and videos

Install App

ಬಿಬಿಎಂಪಿ ಕಛೇರಿ ಮೇಲ್ಚಾವಣಿಗೆ ಸೋಲಾರ್

Webdunia
ಬುಧವಾರ, 17 ನವೆಂಬರ್ 2021 (14:54 IST)
ರಾಜಾಜಿನಗರ ಕ್ಷೇತ್ರದ ಬಿಬಿಎಂಪಿ ಕಟ್ಟಡದ ಮೇಲೆ ಇಂದು ಸೋಲಾರ್ ವಿದ್ಯುತ್ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು. ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಡಿ ಈ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿಯೇ ಪ್ರಾಯಶಃ: ಇದು ಪ್ರಪ್ರಥಮ ಪ್ರಯೋಗವಾಗಿದೆ.ಸುಮಾರು 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಸೋಲಾರ್ ವಿದ್ಯುತ್ ಘಟಕವನ್ನು ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಎಂಎಸ್‌ಐಎಲ್ ಸಂಸ್ಥೆಯು ಅಳವಡಿಸಿದೆ. ಸದ್ಯಕ್ಕೆ 40 ಕಿಲೋವಾಟ್ ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಸೌರಶಕ್ತಿಯ ಉಪಕರಣಗಳನ್ನು ಅಳವಡಿಸಲಾಗಿದೆ. ದಿನಕ್ಕೆ ಸುಮಾರು 160 ರಿಂದ 200 ಯೂನಿಟ್ ಗಳವರೆಗೆ ವಿದ್ಯುತ್ ಉತ್ಪಾದನೆಯಾಗಲಿದೆ.
 
ಮೊದಲ ಹಂತದಲ್ಲಿ ಬಿಬಿಎಂಪಿ ಇಂಜಿನಿಯರಿಂಗ್, ಆರೋಗ್ಯ ಹಾಗೂ ರೆವಿನ್ಯೂ ಕಚೇರಿಗಳು ವಿದ್ಯುತ್ ಉಪಯೋಗಿಸಿಕೊಳ್ಳಲಿವೆ. ರಜೆ ದಿನಗಳು, ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ,ಈ ದಿನಗಳಲ್ಲಿ ಉಳಿತಾಯವಾಗುವ ವಿದ್ಯುತ್ತನ್ನು ಬೆಸ್ಕಾಂ ಗ್ರಿಡ್ ಗೆ ಸರಬರಾಜು ಮಾಡಲಾಗುವುದು. ಇದರಿಂದ ಪ್ರತಿ ತಿಂಗಳು ಸುಮಾರು 48 ಸಾವಿರ ರೂಪಾಯಿ ಉಳಿತಾಯವಾಗಲಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಬೆಸ್ಕಾಂ ಸಂಸ್ಥೆಯು ಎಂಎಸ್‌ಐಎಲ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.ಈ ಸೌರಶಕ್ತಿ ವಿದ್ಯುತ್ ಘಟಕದ ನಿರ್ವಹಣೆಯನ್ನು ಐದು ವರ್ಷಗಳ ಕಾಲ ಎಂಎಸ್‌ಐಎಲ್ ಸಂಸ್ಥೆಯೇ ನೋಡಿಕೊಳ್ಳಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೊಡ್ಡ ಕನಸಾದ ಸೋಲಾರ್ ಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸುವ ದಿಕು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments