Publish Date: Thu, 03 May 2018 (15:35 IST)
Updated Date: Thu, 03 May 2018 (15:36 IST)
ಟಿಕೆಟ್ ಸಿಗದಿದ್ದಕ್ಕೆ ಸಿಡಿದ್ದೇರುವ ಸೊಗಡು ಶಿವಣ್ಣ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಗೆ ಟಾಂಗ್ ನೀಡಿದ್ದಾರೆ.
ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮದ ಎದುರು ಸೊಗಡು ಶಿವಣ್ಣ ಬೆಂಬಲಿಗರಾದ ಪಂಚಾಕ್ಷರಯ್ಯ ಹಾಗೂ ಆಟೋ ನವೀನ್ ಸೇರಿದ್ದಂತೆ ಹಲವು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಮೂಲಕ ಕಾಂಗ್ರೆಸ್ನ ರಫೀಕ್ ಅಹಮದ್ ಗೆಲುವಿಗೆ ಮುಂದಾಗಿದ್ದಾರೆ. ನಿನ್ನಯಷ್ಟೇ ಸೊಗಡು ಶಿವಣ್ಣ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ರಫೀಕ್ ಅಹಮದ್ ಹೇಳಿದ್ದರು, ಈ ಬೆನ್ನಲ್ಲೇ ಇಂದು ಸೊಗಡು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅಲ್ಲದೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಮತ್ತಷ್ಟು ಕಂಪನ ಉಂಟು ಮಾಡಿದೆ.