Publish Date: Fri, 03 Jan 2020 (19:19 IST)
Updated Date: Fri, 03 Jan 2020 (19:21 IST)
ಪಕ್ಷದ ವರಿಷ್ಠರ ವಿರುದ್ಧ ತೊಡೆತಟ್ಟುವ ಮೂಲಕ ಕಾರ್ಯಕರ್ತರು, ಮುಖಂಡರೇ ಸೋಶಿಯಲ್ ವಾರ್ ಶುರುವಿಟ್ಟುಕೊಂಡಿದ್ದಾರೆ.
ಹುಬ್ಬಳ್ಳಿಯ ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು, ಪಕ್ಷದ ವರಿಷ್ಠರ ವಿರುದ್ಧ ತೊಡೆತಟ್ಟುವ ಮೂಲಕ ಸೋಶಿಯಲ್ ವಾರ್ ನಡೆಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಉತ್ತರ ಕರ್ನಾಟಕದ ಯುವ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ಕಾರ್ಯಕರ್ತರ- ಮುಖಂಡರ ಸಭೆ ಮಾಡಲು ಯುವ ಮುಖಂಡರು ಮುಂದಾಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದ ಪೋಸ್ಟಗಳು ಈಗ ವೈರಲ್ ಆಗಿವೆ.
ಪ್ರಭುರಾಜಗೌಡ ಪಾಟೀಲರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಆಗಿದೆ. ಪಕ್ಷ ಸಂಘಟನೆಗೆ ಎಚ್ಚರಿಕೆ ಘಂಟೆ ಎಂದು ಪೋಸ್ಟ್ ಮಾಡಿದ್ದು, ಇನ್ನಾದರೂ ಇದರಿಂದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ಡಿ. ದೇವೇಗೌಡರು ಗಮನ ಹರಿಸುತ್ತಾರಾ ಅನ್ನೋದು ರಾಜಕೀಯ ಚರ್ಚೆಯಲ್ಲಿರೋ ವಿಷಯವಾಗಿದೆ.