ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟ ಮುಂದುವರಿಸಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕಾಂಗ್ರೆಸ್ಸಿಗರೇ ದಾಖಲೆ ಕೊಟ್ಟಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಕೊಟ್ಟ ದೂರಿನನ್ವಯ ಲೋಕಾಯುಕ್ತ ಪೊಲೀಸರು ತನಿಖೆ ಕೈಗೆತ್ತಿಕೊಂಡು ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ವಿರುದ್ಧ ತನಿಖೆ ನಡಸಿದ್ದವು.
ಅಂತಿಮವಾಗಿ ವರದಿ ನೀಡಿದ್ದು, ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದವು. ಆದರೆ ಇಷ್ಟಕ್ಕೇ ಸ್ನೇಹಮಯಿ ಕೃಷ್ಣ ಸುಮ್ಮನಾಗಿಲ್ಲ. ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತುಪಡಿಸುವವರೆಗೂ ಸುಮ್ಮನಿರಲ್ಲ ಎಂದು ಪ್ರತಿಜ್ಞೆ ನಡೆಸಿದ್ದರು.
ಇದೀಗ ಖಾಸಗಿ ಮಾಧ್ಯಮಕ್ಕೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಬಗ್ಗೆ ಕೆಲವು ಕಾಂಗ್ರೆಸ್ಸಿಗರೇ ದಾಖಲೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಕ್ರಮ ಸೈಟು ಪಡೆಯಲು ಯಾರೆಲ್ಲಾ ಶಾಮೀಲಾಗಿದ್ದಾರೋ ಅವರೆಲ್ಲರ ವಿರುದ್ಧ ತನಿಖೆಯಾಗಬೇಕು ಎಂಬುದೇ ನನ್ನ ಹೋರಾಟ ಎಂದಿದ್ದಾರೆ.