ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮನೆಯಲ್ಲೀಗ ಸೂತಕದ ಛಾಯೆ. ಕಾರಣ, ಕೃಷ್ಣ ಸಹೋದರಿ ಸುನೀತಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಎಲ್ಲಾ ಸರಿಯಾಗಿದ್ದರೆ, ಇಂದು ಕೃಷ್ಣ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಬೇಕಿತ್ತು. ಅದಕ್ಕಾಗಿ ನಿನ್ನೆಯೇ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಆದರೆ ನಿನ್ನೆ ರಾತ್ರಿ ಸಹೋದರಿ ಅಗಲಿದ ಸುದ್ದಿ ಕೇಳಿದ ತಕ್ಷಣ ಅವರು ರಾಜ್ಯಕ್ಕೆ ಮರಳಿದ್ದಾರೆ.
ಹಾಗಾಗಿ ಬಿಜೆಪಿ ಸೇರ್ಪಡೆ ಗಳಿಗೆ ಮುಂದಕ್ಕೆ ಹೋಗಿದೆ. ಜನವರಿಯಲ್ಲಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ಕೃಷ್ಣ ಪಂಚ ರಾಜ್ಯಗಳ ಚುನಾವಣೆ ಇದ್ದುದ್ದರಿಂದ ಬಿಜೆಪಿ ಸೇರ್ಪಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಆದರೆ ಇದೀಗ ಮತ್ತೆ ವಿಘ್ನ ಎದುರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ