ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಹಲವೆಡೆಯಿಂದ ಶುಭಾಷಯ ಹರಿದುಬರುತ್ತಿದೆ. ಆದರೆ ಪಾಕಿಸ್ತಾನದ ಈ ಬಾಲಕಿ ಮಾತ್ರ ಮೋದಿ ಅಭಿಮಾನಿಗಳ ಸಾಲಲ್ಲಿ ವಿಶೇಷವಾಗಿ ನಿಲ್ಲುತ್ತಾಳೆ.
11 ವರ್ಷದ ಅಖೀದತ್ ನವೀದ್ ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾಳೆ. ಅಷ್ಟೇ ಅಲ್ಲ, ಉಭಯ ದೇಶಗಳ ನಡುವೆ ಸೇತುವೆಯಾಗಿದ್ದು, ಶಾಂತಿ ನೆಲೆಗೊಳ್ಳುವಂತೆ ಮಾಡಿ ಎಂದೂ ಮನವಿ ಮಾಡಿದ್ದಾಳೆ.
“ಬಹುಶಃ ನೀವು ಭಾರತೀಯರ ಹೃದಯ ಗೆದ್ದಿದ್ದೀರಿ. ಅದಕ್ಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ. ಅದೇ ರೀತಿ ಪಾಕಿಸ್ತಾನಿಯರ ಹೃದಯ ಗೆಲ್ಲಿ. ಎರಡೂ ದೇಶಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸಿ. ನಾವು ಬುಲೆಟ್ ಗಳಿಗಿಂತ, ಬುಕ್ ಖರೀದಿಸುವಂತಾಗಲಿ, ನಾವು ಗನ್ ಖರೀದಿಸುವುದು ಬೇಡ. ಬಡವರಿಗೆ ಔಷಧಿ ಖರೀದಿಸೋಣ” ಎಂದು ಈ ಪುಟ್ಟ ಪೋರಿ ತನ್ನದೇ ರೀತಿಯಲ್ಲಿ ಪತ್ರ ಬರೆದಿದ್ದಾಳೆ. ಇದಕ್ಕೆ ಪ್ರಧಾನಿ ಮೋದಿ ಹೇಗೆ ಸ್ಪಂದಿಸುತ್ತಾರೆ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ