Select Your Language

Notifications

webdunia
webdunia
webdunia
webdunia

ಬೊಜ್ಜು ಕರಗಿಸಲು ಕಸರತ್ತಿನ ಮೊರೆ ಹೋದ ಪೊಲೀಸರು

ಬೊಜ್ಜು ಕರಗಿಸಲು ಕಸರತ್ತಿನ ಮೊರೆ ಹೋದ ಪೊಲೀಸರು
ಕಲಬುರಗಿ , ಸೋಮವಾರ, 6 ಆಗಸ್ಟ್ 2018 (17:28 IST)
ಡೊಳ್ಳು ಹೊಟ್ಟೆ ಹೊತ್ತ ಪೊಲೀಸರು ಸ್ವತಃ ಇಲಾಖೆಯ ಹಿರಿಯ ಅಧಿಕಾರಿಗಳ ಅಸಮಧಾನಕ್ಕೆ ಕಾರಣವಾಗಿದ್ದರು. ಹೀಗಾಗಿ ಡೊಳ್ಳು ಹೊಟ್ಟೆಯ ಪೊಲೀಸರ ಕೊಬ್ಬು ಕರಗಿಸಲು ಹಿರಿಯ ಅಧಿಕಾರಿ ಮಾಸ್ಟರ್ ಪ್ಲಾನ್ ಜಾರಿಮಾಡಿದ್ರು. ಹೀಗಾಗಿ ದಪ್ಪಗಿದ್ದ ಪೊಲೀಸರ ತೂಕ ಈಗ ಕರಗಲಾರಂಭಿಸಿದೆ. ಇದು ಪೊಲೀಸರಲ್ಲಿ ಸಹಜವಾಗಿ ಸಂತಸಕ್ಕೆ ಕಾರಣವಾಗಿದೆ.


ಕಲಬುರಗಿಯಲ್ಲಿ ಆಯ್ದ 8 ಪೊಲೀಸ್ ಠಾಣೆಗಳ 100 ಪೇದೆಗಳ ಹಾಗೂ ಸಹಾಯಕ ಸಬ್ ಇನ್ಸಪೆಕ್ಟರ್ ಗಳ ಬೊಜ್ಜು ನಿಧಾನವಾಗಿ ಕರಗುತ್ತಿದೆ. ತೂಕ ಹೆಚ್ಚಿಸಿಕೊಂಡವರಿಗಾಗಿ ಎಸ್ ಪಿ ಎನ್. ಶಶಿಕುಮಾರ್ ತೂಕದ ಸಿಬ್ಬಂದಿ ಗುರ್ತಿಸಿ ಅವರಿಗೆ ಬೆಳಗ್ಗೆ  ಹಾಗೂ ಸಂಜೆ ತಲಾ ಎರಡು ಗಂಟೆಗಳ ಕಸರತ್ತಿಗೆ ಹಚ್ಚಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ಒಟ್ಟು ನಾಲ್ಕು ಗಂಟೆಗಳ ಕಾಲ ದಪ್ಪಗಿರುವ ಪೊಲೀಸ್ ಸಿಬ್ಬಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಓಟ, ವೇಗದ ನಡಿಗೆ ತರಬೇತಿ ನಡೆಯುತ್ತಿದೆ. ಇದರಿಂದ ಪೊಲೀಸರು ಸ್ಲಿಮ್ ಆಗುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ಸಾಟಿಯಾದ ಪ್ರತಿಸ್ಪರ್ಧಿಯಿಲ್ಲ: ಬಿಎಸ್ ವೈ