Select Your Language

Notifications

webdunia
webdunia
webdunia
webdunia

ನಾಳೆ ಶಿವರಾತ್ರಿ‌ಹಬ್ಬದ ಅಂಗವಾಗಿ ಪ್ರಾಣಿವಧೆ ನಿಷೇಧ

ಮಾಂಸ ಮಾರಾಟ

geetha

bangalore , ಗುರುವಾರ, 7 ಮಾರ್ಚ್ 2024 (16:42 IST)
ಬೆಂಗಳೂರು- ನಾಳೆ ಮಹಾ ಶಿವರಾತ್ರಿ ಹಬ್ಬ  ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ.ಶುಕ್ರವಾರ "ಮಹಾ ಶಿವರಾತ್ರಿ" ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಈ ಕುರಿತಂತೆ ಇಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ.ರವಿಕುಮಾರ್ ಆದೇಶವನ್ನ ಹೊರಡಿಸಿದ್ದಾರೆ..8 ರಂದು ಮಾಂಸ ಮಾರಾಟ ಅಂಗಡಿಗಳ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕೆಂದು ಕೋರಲಾಗಿದೆ.ಈ ಆದೇಶವನ್ನು ಉಲ್ಲಂಘಿಸಿದರೆ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
 
ಇನ್ನೂ ನಾಳೆ ನಗರದ ಮಹಾ ಶಿವರಾತ್ರಿ ಅಂಗವಾಗಿ ಮಾ.8ರ ಶುಕ್ರವಾರ ಹಾಗೂ ಮಾ. 9ರ ಶನಿವಾರದಂದು ಪಟ್ಟಣದ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ಉತ್ಸವಗಳು ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚುನಾವಣಾ ಆಯೋಗದ‌ ಸಭೆ ಇದೆ- ಡಿಸಿಎಂ ಡಿಕೆಶಿವಕುಮಾರ್