Select Your Language

Notifications

webdunia
webdunia
webdunia
webdunia

ಗಗನಕ್ಕೇರಿದ ಮೆಣಸಿನಕಾಯಿ ಬೆಲೆ- ತರಕಾರಿ ದರ ಹೇಗಿದೆ? ಇಲ್ಲಿದೆ ವಿವರ

ಗಗನಕ್ಕೇರಿದ ಮೆಣಸಿನಕಾಯಿ ಬೆಲೆ- ತರಕಾರಿ ದರ ಹೇಗಿದೆ? ಇಲ್ಲಿದೆ ವಿವರ
bangalore , ಭಾನುವಾರ, 20 ಮಾರ್ಚ್ 2022 (14:28 IST)
ಬೇರೆ ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿತ್ತು ಈಗ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಮೆಣಸಿನಕಾಯಿ ಬೆಳೆ ಮಂಜಿನ ವಾತಾವರಣದಲ್ಲಿ ಇಳುವರಿ ಇರುವುದಿಲ್ಲ. ಹೀಗಾಗಿ ಕಡಿಮೆ ಪ್ರಮಾಣದ ಮೆಣಸಿನಕಾಯಿ ಸಿಗುತ್ತೆ, ಅದಕ್ಕೆ ಬೆಲೆ ಹೆಚ್ಚಿದೆ ಎಂದು ವ್ಯಾಪಾರಸ್ಥರು ಮಾಹಿತಿ ನೀಡಿದ್ದಾರೆ.ನಗರದಲ್ಲಿ ಮೆಣಸಿನಕಾಯಿ ಕೆಜಿಗೆ ಬರೋಬ್ಬರಿ 100 ರಿಂದ 150 ರೂಪಾಯಿಗೆ ತಲುಪಿದೆ. ಕೆಲ ದಿನಗಳ ಹಿಂದೆ ಮೆಣಸಿನಕಾಯಿಗೆ ಕೇವಲ 50 ರಿಂದ 60 ರೂಪಾಯಿ ಇತ್ತು. ಇದೀಗ ಏಕಾಏಕಿ ಸುಮಾರು ಎರಡರಿಂದ ಮೂರು ಪಟ್ಟು ಬೆಲೆ ಏರಿಕೆ ಆಗಿದೆ. ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಬರ್ತಿತ್ತು, ಈಗ ಕಡಿಮೆಯಾಗಿದೆ. ಈಗಿನ ವಾತಾವರಣಕ್ಕೆ ಮೆಣಸಿನಕಾಯಿ ಬೀಜ ಹಾಳಾಗಿ ಬೆಳೆ ಕಡಿಮೆಯಾಗಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಉಳಿದಂತೆ, ಬದನೆಕಾಯಿ ಕೆಜಿಗೆ 40 ರಿಂದ 50 ರೂಪಾಯಿ, ಟೊಮ್ಯಾಟೊ ಕೆಜಿ 10 ರಿಂದ 20 ರೂಪಾಯಿ, ವಠಾಣೆ ಶೇಂಗಾ ಕೆಜಿ 50 ರಿಂದ 80 ರೂಪಾಯಿ, ಹಾಗಲಕಾಯಿ ಕೆಜಿ 50 ರಿಂದ 60 ರೂಪಾಯಿ ಆಗಿದೆ.
 
ವಿಜಯಪುರ: ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಮೆಣಸಿನಕಾಯಿ ಮತ್ತುಷ್ಟು ಖಾರವಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹತ್ತು ಕೆಜಿ ಮೆಣಸಿನಕಾಯಿಗೆ 500 ರಿಂದ 800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸವಾಲ್ ಮೂಲಕ ದಲ್ಲಾಳಿಗಳು ಮಾರಾಟವಾಗುತ್ತಿರೋ ಮಿರ್ಚಿ, ಹೆಚ್ಚಿನ ಬೆಲೆಗೆ ಮೆಣಸಿನಕಾಯಿ ಮಾರಾಟವಾಗುತ್ತಿರೋದಕ್ಕೆ ಬೆಳೆಗಾರರಲ್ಲಿ ಸಂತಸ ಹೆಚ್ಚಿದೆ. ಆದರೆ, ಗ್ರಾಹಕರ ಪಾಲಿಗೆ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ.
ಎಪಿಎಂಸಿ ಆಚೆ, ಹೊರಗಡೆ ಮಾರುಕಟ್ಟೆಯಲ್ಲಿ ಕೆಜಿಗೆ 100 ರಿಂದ 120 ರೂಪಾಯಿ ಮೆಣಸಿನಕಾಯಿ ಮಾರಾಟ ಆಗುತ್ತಿದೆ. ವಾತಾವರಣ ವೈಪರಿತ್ಯ, ಅಕಾಲಿಕ‌ ಮಳೆ ಹಾಗೂ ರೋಗಬಾಧೆಯಿಂದ ಮೆಣಸಿನಕಾಯಿ ಬೆಳೆ ಹಾಳಾಗಿದೆ. ಸದ್ಯ ಕಡಿಮೆ ಇಳುವರಿ ಇರುವ ಕಾರಣ ಮೆಣಸಿನಕಾಯಿ ಬೆಲೆ ಗಗನಕ್ಕೇರಿದೆ ಎಂದು ಹೇಳಲಾಗಿದೆ. ಆಂದ್ರಪ್ರದೇಶ ಮೈತಪೂರ, ಗುಂಟೂರ, ಪಾಪತ್ಲಾ, ಗುಡೂರು ಭಾಗದಿಂದ ಮೆಣಸಿನಕಾಯಿ ಆಮದಾಗುತ್ತಿದೆ. ಈ‌ ಭಾಗದಲ್ಲಿ ಮೆಣಸಿನಕಾಯಿ ಬೆಳೆ ಇಲ್ಲದ ಕಾರಣ ಆಂಧ್ರ ಭಾಗದಿಂದ ಮೆಣಸಿನಕಾಯಿ ಆಮದಾಗುತ್ತಿದೆ.
 
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೂಡ ಹಸಿ ಮೆಣಸಿನಕಾಯಿ ಬೆಲೆ ಏರಿಕೆ ಆಗಿದೆ. ಕೆಜಿ ಮೆಣಸಿನಕಾಯಿಗೆ 120 ರಿಂದ 130 ಕ್ಕೆ ಮಾರಾಟ ಮಾಡಲಾಗುತ್ತಿದೆ. ಮೆಣಸಿನಕಾಯಿ ಆವಕ ಕಡಿಮೆ ಹಿನ್ನಲೆ, ಏಕಾಏಕಿ ಮೆಣಸಿನಕಾಯಿ ದರ ಏರಿಕೆ ಆಗಿದೆ. ಇನ್ನಷ್ಟು ದರ ಹೆಚ್ಚಳ ಆಗುವ ಸಂಭವ ಇದೆ ಎಂದು ಹೇಳಲಾಗಿದೆ. ಮದುವೆ ಸೀಸನ್ ಶುರುವಾದ ಹಿನ್ನಲೆ, ಮತ್ತಷ್ಟು ದುಬಾರಿ ಆಗೋ ಸಂಭವ ಇದೆ. ವಾರದ ಹಿಂದಿನ ದರಕ್ಕಿಂತ ದುಪ್ಪಟ್ಟು ಬೆಲೆಗೆ ಈಗ ಮೆಣಸಿನಕಾಯಿ ಮಾರಾಟ ಆಗುತ್ತಿದೆ.
 
ಕಾರವಾರ: ಉ‌ತ್ತರ ಕನ್ನಡ ಜಿಲ್ಲೆಯಲ್ಲಿ ಮೆಣಸಿನಕಾಯಿಗೆ ಹೆಚ್ಚಿನ ಬೆಲೆ ಬಂದಿದೆ. 1 ಕೆಜಿ ಮೆಣಸಿನಕಾಯಿ 100 ರಿಂದ 120 ರೂಪಾಯಿಗೆ ಮಾರಾಟ ಆಗುತ್ತಿದೆ. ರೈತರಿಂದ ಮೆಣಸಿನಕಾಯಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಸಿಗದ ಹಿನ್ನೆಲೆ ಬೆಲೆ ಗಗನಕ್ಕೇರಿದೆ. ಕೆಲವು ವಾರಗಳ ಹಿಂದೆ ಕೆಜಿಗೆ 50 ರಿಂದ 60 ರೂ‌‌ಪಾಯಿಗೆ ಮಾರಟವಿತ್ತು. ಮೆಣಸಿನಕಾಯಿ ಹೇರಳವಾಗಿ ಸಿಗದ ಹಿನ್ನೆಲೆ ಬೆಲೆ ಹೆಚ್ಚಾಗಿದೆ.
 
ಬೇರೆ ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿತ್ತು ಈಗ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಮೆಣಸಿನಕಾಯಿ ಬೆಳೆ ಮಂಜಿನ ವಾತಾವರಣದಲ್ಲಿ ಇಳುವರಿ ಇರುವುದಿಲ್ಲ. ಹೀಗಾಗಿ ಕಡಿಮೆ ಪ್ರಮಾಣದ ಮೆಣಸಿನಕಾಯಿ ಸಿಗುತ್ತೆ, ಅದಕ್ಕೆ ಬೆಲೆ ಹೆಚ್ಚಿದೆ ಎಂದು ವ್ಯಾಪಾರಸ್ಥರು ಮಾಹಿತಿ ನೀಡಿದ್ದಾರೆ. ಉಳಿದಂತೆ, ಹಾಗಲಕಾಯಿ ಕೆಜಿಗೆ 60 ರೂ., ಹೀರೆಕಾಯಿ ಕೆಜಿಗೆ 60 ರೂ., ಕ್ಯಾರೇಟ್ ಕೆಜಿಗೆ 80 ರೂ., ಟೊಮ್ಯಾಟೊ ಕೆಜಿಗೆ 20 ರೂ., ಈರುಳ್ಳಿ ಕೆಜಿಗೆ 30 ರೂಪಾಯಿಗೆ ಮಾರಾಟ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲೆಯ ಹಲವೆಡೆ ವರುಣನ ಆರ್ಭಟ