Webdunia - Bharat's app for daily news and videos

Install App

ಸುಹಾಸ್ ಶೆಟ್ಟಿ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸ್ಕೆಚ್‌: ನಾಳೆಯೇ ಡೇಟ್‌ ಫಿಕ್ಸ್‌ ಎಂದು ಪೋಸ್ಟ್‌

Sampriya
ಭಾನುವಾರ, 4 ಮೇ 2025 (13:46 IST)
Photo Courtesy X
ಮಂಗಳೂರು: ಕೋಮು ಸಂಘರ್ಷದಿಂದ ಕರಾವಳಿ ಬೂದಿಮುಚ್ಚಿದ ಕೆಂಡದಂತಿದೆ. ಜಿಲ್ಲೆಯಲ್ಲಿ ಹಾಕಲಾಗಿದ್ದ ನಿಷೇಧಾಜ್ಞೆಯನ್ನು ವಾಪಸ್‌ ಪಡೆಯಲಾಗಿದೆ. ಈ ಮಧ್ಯೆ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಹಾಕಲಾಗಿದೆ.

ಹಿಂದೂ ಕಾರ್ಯಕರ್ತ, ರೌಡಿಶೀಟರ್‌ ಸುಹಾಸ್ ಶೆಟ್ಟಿ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್‌ ಹಾಕಲಾಗಿದೆ. ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ದಿನಾಂಕ ಫಿಕ್ಸ್ ಮಾಡಿದ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹಿಂದೂ ಮುಖಂಡ ಭರತ್ ಕುಮ್ಡೇಲ್‌ ಅವರನ್ನು 5/5/2025 ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲೆ ಮಾಡುವುದಾಗಿ ಪೋಸ್ಟ್ ಹರಿಬಿಡಲಾಗಿದೆ. ಈ ಹಿಂದೆ ಸುಹಾಸ್ ಶೆಟ್ಟಿ ಪೋಟೋಗೆ ರೈಟ್ ಚಿಹ್ನೆ ಹಾಕಿ ಹಂತಕರು ವಿಕೃತಿ ಮೆರೆದಿದ್ದರು.  

 ಭರತ್ ಕುಮ್ಡೇಲು ಅವರು ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾರೆ. 2017ರ ಜೂನ್ 21 ರಂದು ಅಶ್ರಫ್ ಹತ್ಯೆಯಾಗಿತ್ತು. ಬಂಟ್ವಾಳದ ಬೆಂಜನಪದವು ಎಂಬಲ್ಲಿ ಅಶ್ರಫ್ ಬರ್ಬರವಾಗಿ ಹತ್ಯೆಗೀಡಾಗಿದ್ದ. ಎಸ್‌ಡಿಪಿಐನಲ್ಲಿ ಅಶ್ರಫ್ ಮುಂಚೂಣಿಯಲ್ಲಿದ್ದ. ಆತನ ಹತ್ಯೆ ಬಳಿಕ ಪ್ರತೀಕಾರವಾಗಿ ಬಂಟ್ವಾಳದ ಶರತ್ ಮಡಿವಾಳ ಹತ್ಯೆಯಾಗಿತ್ತು.

ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಶರಣ್ ಪಂಪ್ವೆಲ್, ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಎಂದು ಪೋಸ್ಟ್ ಹರಿಬಿಡಲಾಗಿದೆ. ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಹಾಕಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

ಮುಂದಿನ ಸುದ್ದಿ
Show comments