Publish Date: Sun, 03 May 2020 (21:09 IST)
Updated Date: Sun, 03 May 2020 (21:11 IST)
ಕಲಬುರಗಿ ನಗರದಲ್ಲಿ ಮತ್ತೆ ಆರು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
ಇದರಿಂದ ಸೋಂಕು ಪೀಡಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಕಲಬುರಗಿ ನಗರದ ರೋಗಿ ಸಂಖ್ಯೆ-532ರ ಸಂಪರ್ಕದಲ್ಲಿ ಬಂದ ಮೋಮಿನಪುರ ಪ್ರದೇಶದ13 ವರ್ಷದ ಬಾಲಕಿ ಮತ್ತು 54 ವರ್ಷದ ಪುರುಷನಿಗೆ ಹಾಗೂ ಇದೇ ಪ್ರದೇಶದ ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯ 41 ವರ್ಷದ ಪುರುಷನಿಗೂ ಕೊರೋನಾ ಸೋಂಕು ಕಂಡುಬಂದಿದೆ.
ಇದಲ್ಲದೆ ILI ಹಿನ್ನೆಲೆಯಿಂದ ಮಿಲನ್ ಚೌಕ್ ಪ್ರದೇಶದ 35 ವರ್ಷದ ಯುವತಿ ಮತ್ತು ಗಾಜೀಪುರ ಪ್ರದೇಶದ 78 ವರ್ಷದ ವೃದ್ಧನಿಗೂ ಕೋವಿಡ್-19 ಸೋಂಕು ತಗುಲಿದೆ. ಸಂತ್ರಾಸವಾಡಿ ಪ್ರದೇಶದ 22 ವರ್ಷದ ಯುವಕನಿಗೂ ಕೊರೋನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಈತನಿಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಪೀಡಿತ 61 ಜನರಲ್ಲಿ ಇದೂವರೆಗೆ 18 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 38 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.