ಸಿಸಿಟಿವಿ ವಿಡಿಯೋ ಆಧರಿಸಿ ಹಂತಕನ ರೇಖಾಚಿತ್ರ ತಯಾರಿಸುತ್ತಿರುವ ಪೊಲೀಸರು

Webdunia
ಗುರುವಾರ, 7 ಸೆಪ್ಟಂಬರ್ 2017 (19:27 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಗೌರಿ ಲಂಕೇಶ್ ನಿವಾಸಕ್ಕೆ ತೆರಳಿದ್ದ ಎಸ್`ಐಟಿ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸುತ್ತಮುತ್ತ ಸಹ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನಲ್ಲೂ ಕೆಲ ದಾಖಲಾತಿಗಳನ್ನ ವಶಕ್ಕೆ ಪಡೆದು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.

ಬಸವನಗುಡಿಯಲ್ಲಿರುವ ಪತ್ರಿಕಾ ಕಚೇರಿಗೂ ಭೇಟಿ ನೀಡಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಹಂತಕನ ಪತ್ತೆಗೆ ರೇಖಾ ಚಿತ್ರ ಸಿದ್ಧಪಡಿಸುತ್ತಿದ್ಧಾರೆ. ಮಾಧ್ಯಮಗಳ ವರದಿಗಳ ಪ್ರಕಾರ, ಆರೋಪಿಯ ವಯಸ್ಸು 25-30 ವರ್ಷ ಎನ್ನಲಾಗಿದ್ದು, 5.4 ಅಡಿ ಅಥಬಾ 5.5 ಅಡಿ ಎತ್ತರವಿದ್ದ ಎಂದು ತಿಳಿದುಬಂದಿದೆ.

ಗೌರಿ ಲಂಕೇಶ್ ಮೇಲೆ ದಾಳಿ ನಡೆಸುವಾಗ ಹಂತಕ ಕಲರ್ ಜಾಕೆಟ್ ಧರಿಸಿದ್ದ, ಕಪ್ಪು ಹಲ್ಮೆಟ್, ಕಪ್ಪು ಪ್ಯಾಂಟ್ ಹಾಕಿಕೊಂಡಿದ್ದ. ಬೆನ್ನಿಗೆ ಬ್ಯಾಗ್ ಹಾಕಿಕೊಂಡಿದ್ದ. ಜೊತೆಗೆ ಸಿಸಿಟಿವಿ ವಿಡಿಯೋದಲ್ಲಿ ಹಂತಕನ ಕಣ್ಣಿನ ಭಾಗದ ಮುಖ ಕೊಂಚ ಗೋಚರಿಸಿದ್ದು, ಅದನ್ನ ಆಧರಿಸಿ ರೇಖಾಚಿತ್ರ ತಯಾರು ಮಾಡಲಾಗುತ್ತಿದೆ.  ಬೆಂಗಳೂರಿನ ಚಿತ್ರಕಲಾ ಪರಿಷತ್ ಕಲಾವಿದರ ನೆರವು ಪಡೆದು ತಂತ್ರಜ್ಞಾನ ಬಳಸಿ ರೇಖಾಚಿತ್ರ ತಯಾರು ಮಾಡಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಕಾಶ್ಮೀರದಲ್ಲಿ ಹಿಮಪಾತ, ವಿಮಾನ ಹಾರಾಟದಲ್ಲಿ ಭಾರೀ ವ್ಯತ್ಯಯ

ಅಬಕಾರಿ ಇಲಾಖೆಯಲ್ಲಿ ಕಮಿಷನ್ ಸಂಗ್ರಹಿಸಲು ಹೇಳಿದವರೇ ರಾಹುಲ್ ಗಾಂಧಿ: ಆರ್ ಅಶೋಕ್ ಆರೋಪ

ಅಬ್ಬಬ್ಬಾ, ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷನ ಮೇಲೆ ಇದೆಂಥಾ ಆರೋಪ

ಮುಂದಿನ ಸುದ್ದಿ
Show comments