Webdunia - Bharat's app for daily news and videos

Install App

ಹಣಕ್ಕಾಗಿ ಪೀಡುಸುತ್ತಿದ್ದ ಪಾಪಿ ಪತಿ.ಬಿಇ ಪದವೀಧರೆ ಪತ್ನಿ ಸುಸೈಡ್

Webdunia
ಗುರುವಾರ, 27 ಜುಲೈ 2023 (19:52 IST)
ಕಾಟನ್ ಪೇಟೆಯಲ್ಲಿರುವ ಮಂಜುನಾಥ್ ಅನ್ನೋನಿಗೆ ಕಳೆದ ಒಂದೂವರೇ ವರ್ಷದ ಹಿಂದೆ ಕುಟುಂಬದವರು ಮದುವೆ ಮಾಡಿಕೊಟ್ಟಿದರು.ಮದುವೆಯನ್ನು ‌ಕೂಡ ಸಕತ್ ಗ್ರಾಂಡ್ ಆಗೆ ಮಾಡಿದ್ರು, ವರನಿಗೆ ಕೈಗೆ ಐದು ಲಕ್ಷ ಹಣ, ಸಾಕಷ್ಟು ಚಿನ್ನಾಭರಣ ಕೂಡ ಕೊಟ್ಟಿದ್ರು ಹಾಗಂತೆ ಇವನೇನು ಯಾವೋದು ಗವರ್ನಮೆಂಟ್ ಎಂಪ್ಲಾಯ್ ಅಲ್ಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ನಮ್ಮ‌ ಮಗಳನ್ನ. ಚೆನ್ನಾಗಿ ನೋಡಿಕೊಳ್ಳಲ್ಲಿ ಎಂದು ಕೇಳಿದಷ್ಟು ಹಣ ಕೊಟ್ಟಿದ್ರು.ಆದ್ರೂ ಇವನ ಹಣದ ದಾಹ ಕಡಿಮೆ ಆಗಲಿಲ್ಲ. ಇತ್ತೀಚಿಗೆ ನಿಮ್ಮ ಮನೆಯಿಂದ ಹಣ ತೆಗೆದುಕೊಂಡು ‌ಬಾ ಅಂತ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದು ಪೀಡಿಸುತ್ತಿದ್ದನಂತೆ, ಇದಕ್ಕೆ ಅವರ ಅತ್ತೆ, ಮಾವ, ಸಾಲದಕ್ಕೆ ನಾದಿನಿ ಕೂಡ ಹಿಂಸೆ ಕೊಡುತ್ತಿದ್ರಂತೆ, ತನ್ನ ತಾಯಿ ಬಳಿ ಐಶ್ವರ್ಯ ತುಂಬಾ ಸಾರಿ ನೋವು  ಹೇಳಿಕೊಂಡಿದ್ದಳಂತೆ ಹೇಗೋ ಅನುಸರಿಸಿಕೊಂಡು ಜೀವನ ಮಾಡಬೇಕಮ್ಮ ಅಂತ ಬುದ್ದಿ ಹೇಳಿದ್ರಂತೆ,‌ ಮಗು‌‌ ಇದೆ  ದುಡುಕಿ ಕೆಟ್ಟ ನಿರ್ಧಾರ ಮಾಡಬೇಡ ಅಂತ ಸಮಾಧಾನ ಮಾಡಿದ್ರಂತೆ. 

ಬಿಇ ಪದವೀಧರೆ ಯಾಗಿದ್ದ ಮೃತ ಐಶ್ವರ್ಯ ನಿನ್ನೆ ಅಮ್ಮನಿಗೆ ವಾಟ್ಸಪ್ ಕಾಲ್ ಮಾಡಿ ನಾನು ಸುಸೈಡ್ ಮಾಡಿಕೊಳ್ಳುತ್ತಿದ್ದೇನೆ ನನ್ನ ಮಗುವನ್ನು  ಚೆನ್ನಾಗಿ ನೋಡಿಕೆ ಎಂದು ಹೇಳಿದ್ದಾಳೆ . ನನ್ನ ಸಾವಿಗೆ ನನ್ನ ಗಂಡ , ಅತ್ತೆ, ಮಾವ ನಾದಿನಿನೇ ಕಾರಣ ಅಂತ ‌ಲೆಟರ್ ಬರೆದು ನೇಣಿಗೆ ಶರಣಾಗಾಗಿದ್ದಾಳೆ. ಘಟನೆ ಸಂಬಂಧ ಹಲಸೂರ್ ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಗಳನ್ನ ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ. ಆದ್ರೇ ಒಂದೂವರೇ ವರ್ಷದ ಮಗು ಮಾತ್ರ ತಂದೆ ತಾಯಿಯನ್ನು‌ ಕಳೆದುಕೊಂಡು ರೋಧಿಸುತ್ತಿದೆ. ಇನ್ನಾದ್ರು ವರದಕ್ಷಿಣೆ ಕಿರುಕುಳ ಅನ್ನೋ ಪಡಂಭೂತಕ್ಕೆ ಅಂತ್ಯ ಹಾಡಬೇಕಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments