Publish Date: Wed, 14 Jun 2023 (08:42 IST)
Updated Date: Wed, 14 Jun 2023 (10:25 IST)
ಕೊಲಾರ : ತನ್ನ 2 ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆಗೈದ ಪ್ರಕರಣ ಮುಳಬಾಗಿಲಿನ ಕೆ.ಬಿ.ಕೊತ್ತೂರು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ರಮ್ಯಾ (2) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯ ತಂದೆ ಗಂಗಾಧರನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಸೋಮವಾರ ಸಂಜೆ ತೋಟದ ಬಳಿಗೆ ಹೋಗಿ ಬರುತ್ತೇನೆ ಎಂದು ಗಂಗಾಧರ ಮಗಳನ್ನು ಕರೆದುಕೊಂಡು ಹೋಗಿದ್ದ.
ಈ ವೇಳೆ ರಮ್ಯಾಳನ್ನು ಕತ್ತು ಹಿಸುಕಿ ಸಾಯಿಸಿ ತೋಟದ ಬಳಿಯೇ ಬಿಟ್ಟು ಪರಾರಿಯಾಗಿದ್ದಾನೆ. ರಾತ್ರಿ ಎಷ್ಟು ಸಮಯವಾದರೂ ಮನೆಗೆ ಮರಳಿ ಬಾರದ ಕಾರಣ ತೋಟದ ಬಳಿ ಹೋಗಿ ನೋಡಿದಾಗ ಮಗು ಮೃತಪಟ್ಟಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.