Publish Date: Tue, 13 Jun 2023 (12:20 IST)
Updated Date: Tue, 13 Jun 2023 (12:13 IST)
ರಾಂಚಿ : 10 ರೂ. ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದ ಪ್ರಕರಣ ಜಾಖಂಡ್ ಛತ್ರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಮೃತ ಬಾಲಕನನ್ನು ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಬಿಲೇಶ್ ಭುಯಾನ್ (48) ಎಂದು ಗುರುತಿಸಲಾಗಿದೆ. ಮೃತನ 15 ವರ್ಷದ ಸಹೋದರಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಶಿಷ್ಟನಗರ ಪೊಲೀಸರು ಬಂಧಿಸಿದ್ದಾರೆ.
ಬಾಲಕನ ಇಬ್ಬರೂ ಪೋಷಕರು ಬೆಳಗ್ಗೆ 9 ಗಂಟೆ ಸುಮಾರಿಗೆ ಮದ್ಯದ ಅಮಲಿನಲ್ಲಿದ್ದರು. ಈ ವೇಳೆ ಬಾಲಕ ತನ್ನ ತಂದೆಯೊಂದಿಗೆ 10 ರೂ. ಕೇಳಿದ್ದಾನೆ. ಇದರಿಂದ ಕೋಪಗೊಂಡ ಬಾಲಕನ ತಂದೆ ಆತನ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.