Select Your Language

Notifications

webdunia
webdunia
webdunia
webdunia

ನಿಂತಲ್ಲೇ ನಿಂತಿವೆ ಸೀಜ್ ಆದ ವಾಹನಗಳು..!

38 ಸಾವಿರ ವಾಹನಗಳ ಹರಾಜಿಗೆ ಕೋರ್ಟ್ ಮೊರೆ ಹೋದ ಪೊಲೀಸರು

ನಿಂತಲ್ಲೇ ನಿಂತಿವೆ ಸೀಜ್ ಆದ ವಾಹನಗಳು..!
Bangalore , ಸೋಮವಾರ, 12 ಜುಲೈ 2021 (07:43 IST)
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ ಮಾಲೀಕರಿಂದ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ ಆರೋಪಿಗಳಿಂದ ಜಪ್ತಿ ಮಾಡಲಾದ ಬೈಕ್ ಹಾಗೂ ಕಾರ್ ಸೇರಿದಂತೆ ಇನ್ನಿತರ ವಾಹನಗಳೇ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿವೆ.

ಹಳೇ ಪ್ರಕರಣಗಳಲ್ಲಿ ಸೀಜ್ ಮಾಡಲಾಗಿರುವ 38 ಸಾವಿರ ವಾಹನಗಳು ತುಕ್ಕು ಹಿಡಿಯುತ್ತಿದ್ದರೆ ಮತ್ತೊಂದೆಡೆ ವಶಕ್ಕೆ ಪಡೆದುಕೊಂಡ ವಾಹನಗಳನ್ನು ನಿಲ್ಲಿಸುವುದಕ್ಕೆ ಜಾಗದ ಅಭಾವ ಎದುರಾಗಿದೆ. 2015 ರಿಂದ ಇದುವರೆಗೂ ನಗರದಲ್ಲಿ ಸೀಜ್ ಮಾಡಿದ ವಾಹನಗಳ ಪೈಕಿ 38 ಸಾವಿರಕ್ಕೂ ಅಧಿಕ ವಾಹನಗಳನ್ನು ಮಾಲೀಕರು ಇದುವರೆಗೂ ಬಂದು ಬಿಡಿಸಿಕೊಂಡು ಹೋಗಿಲ್ಲ. ಇದರಿಂದ ಬೆಂಗಳೂರು ನಗರದಲ್ಲಿ ಇರುವ ಪೊಲೀಸ್ ಠಾಣಾ ಆವರಣದಲ್ಲಿ ಜಾಗವಿಲ್ಲ ಎಂದು ಮಲ್ಲೇಶ್ವರಂ ಬಳಿಯ ಜಕ್ಕರಾಯನ ಕೆರೆಯಲ್ಲಿ ನಿಲ್ಲಿಸಲಾಗಿದೆ.
ತುಕ್ಕು ಹಿಡಿಯೋ ಹಂತಕ್ಕೆ ಬಂದಿದ್ದರೂ  ಯಾಕೆ ವಿಲೇವಾರಿ ಮಾಡಿಲ್ಲ ಅಂತ ಪೊಲೀಸ್ ಅಧಿಕಾರಿಗಳ ವಿರುದ್ದ ಕಮಿಷನರ್ ಕಮಲ್ ಪಂತ್ ಗರಂ ಆಗಿದ್ದಾರೆ. ಯಾವಾಗ ಇತ್ತ ಕಮೀಷನರ್ ಗರಂ ಆದ್ರೋ ತಕ್ಷಣವೇ ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ.
ಸದ್ಯ ಈಗ ಎಲ್ಲಾ ವಾಹನಗಳು ತುಕ್ಕು ಹಿಡಿಯುತ್ತಿದ್ದು ಇನ್ನು ಕೆಲ ತಿಂಗಳು ಬಿಟ್ಟರೆ ಹರಾಜು ಹಾಕಿದರೂ ಗುಜುರಿಗೂ ಸೇರದಂತಹ ಸ್ಥಿತಿಗೆ ತಲುಪಿದೆ. ನಗರದ ಹಲವು ಪೊಲೀಸ್ ಠಾಣೆಗಳ ಮಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೀಜ್ ಮಾಡಲಾದ ವಾಹನಗಳನ್ನು ನಿಲ್ಲಿಸಲು ಸ್ಥಳವಕಾಶ ಇಲ್ಲದಂತಾಗಿದೆ.  ಒಂದು ವೇಳೆ ನಿಗದಿಗಿಂತ ಸ್ಟೇಷನ್ ಮುಂದೆ ನಿಲ್ಲಿಸಿದರೆ ವಾಹನ ಸಂಚಾರಕ್ಕೆ ತೊಡಕಾಗಲಿದೆ ಅಂತ ಜಕ್ಕರಾಯನಕೆರೆ ಬಳಿ ವಾಹನಗಳನ್ನು ನಿಲ್ಲಿಸಲಾಗಿದ್ದು ಬಂದೋಬಸ್ತ್ ಗೆ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.
ವಾಹನ ವಿಲೇವಾರಿ ಮಾಡುವಂತೆ ಕಮಿಷನರ್ ಸೂಚನೆ ಇತ್ತ ಯಾವಾಗ ಜಕ್ಕರಾಯನಕೆರೆ ಬಳಿ ವಾಹನಗಳು ಸಾಲಾಗಿ ನಿಲ್ಲಿಸೋಕೆ ಶುರು ಆಯ್ತೋ ಆಗ್ಲೆ ನೋಡಿ ಅದನ್ನ ನೋಡಿದ ತುಕ್ಕು ಹಿಡಿಯೋ ಹಂತಕ್ಕೆ ಬಂದಿದ್ದರೂ  ಯಾಕೆ ವಿಲೇವಾರಿ ಮಾಡಿಲ್ಲ ಅಂತ ಪೊಲೀಸ್ ಅಧಿಕಾರಿಗಳ ವಿರುದ್ದ ಕಮಿಷನರ್ ಕಮಲ್ ಪಂತ್ ಗರಂ ಆಗಿದ್ದಾರೆ. ಯಾವಾಗ ಇತ್ತ ಕಮೀಷನರ್ ಗರಂ ಆದ್ರೋ ತಕ್ಷಣವೇ ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ತಕ್ಷಣವೇ ಸೀಜ್ ಆಗಿ ನಿಂತಿರುವ ವಾಹನಗಳನ್ನು ವಿಲೇವಾರಿ ಮಾಡಿ ಇಲ್ಲದಿದ್ದರೆ ಕೋರ್ಟ್ ಆದೇಶ ಪಡೆದು ಆದಷ್ಟು ಬೇಗ ಹರಾಜು ಹಾಕಿ ಎಂದು ಸೂಚಿಸಿದ್ದಾರೆ.
ಇದರಿಂದ ಎಚ್ಚೆತ್ತ ಪೊಲೀಸರು ಈಗ ವಾಹನಗಳನ್ನು ಹರಾಜು ಹಾಕಲು ಅನುಮತಿ ಕೋರಿ ನ್ಯಾಯಾಲಯ ಮೋರೆ ಹೋಗಿದ್ದಾರೆ. ಒಟ್ಟಿನಲ್ಲಿ 2015 ರಿಂದ ಇದುವರೆಗೂ 38,369 ವಾಹನಗಳು ತುಕ್ಕು ಹಿಡಿದಿದ್ದು ಈಗ ಹರಾಜು ಹಾಕಿದರೂ ಯಾರು ತೆಗೆದುಕೊಳ್ಳುತ್ತಾರೋ ಎಂದು ಅನುಮಾನ ಪೊಲೀಸರಿಗೆ ಇದೆ. ಆದರೂ ಕಮಿಷನರ್ ಕಮಲ್ ಪಂಥ್ ಅವರು ಗರಂ ಆದ ಬಳಿಕ ಈಗ ಪೊಲೀಸರು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದು ಆದಷ್ಟು ಬೇಗ ಹರಾಜು ಪಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಜೋಗ ಜಲಪಾತದ ವೈಭವ ಕಣ್ತುಂಬಿಕೊಂಡ ಪ್ರವಾಸಿಗರು..