Select Your Language

Notifications

webdunia
webdunia
webdunia
webdunia

ಸಿದ್ದು ಹೇಳಿಕೆಯನ್ನ ತಿರುಚಿ ಹೇಳಲಾಗುತ್ತಿದೆ

Siddu's statement is being distorted
ಬೆಳಗಾವಿ , ಸೋಮವಾರ, 24 ಏಪ್ರಿಲ್ 2023 (17:30 IST)
ಲಿಂಗಾಯತ ಸಿಎಂ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಗೋಕಾಕ್​​ನಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿ ಹೇಳಲಾಗುತ್ತಿದೆ. ಬಿಜೆಪಿಯವರು ಭಾವನಗೆಳನ್ನು ಕೆರಳಿಸುವ ಯತ್ನ ಮಾಡುತ್ತಿದ್ದಾರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾಜಿ ಡಿಸಿಎಂ ಲಕ್ಷ್ಮಣ​​​​​ ಸವದಿ ಬ್ಯಾಟ್​​​​​ ಬೀಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್​​​ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ರು. ಮಾಜಿ ಸಿಎಂ ಜಗದೀಶ್​​ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್​​ ಸವದಿ ಪಕ್ಷ ಬಿಟ್ಟಿದ್ದು ಸಮುದ್ರದಲ್ಲಿನ ಒಂದು ಲೋಟ ನೀರು ತೆಗೆದಂತೆ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ರು. ಅವರಿಗೆ ನಾವು ಒಂದು ಲೋಟ ನೀರೇ ಇರಬಹುದು. ಚುನಾವಣೆ ಆದ ಬಳಿಕ ಗೊತ್ತಾಗುತ್ತೆ ನಾವು ತಂಬಿಗೆ ನೀರೋ, ಬಕೆಟ್ ನೀರೋ, ಯಾವ ನೀರು ಅಂತ ಗೊತ್ತಾಗುತ್ತೆ. ಗೋಕಾಕ್​​ ಚುನಾವಣೆಯಲ್ಲಿ ಈ ಬಾರಿ ಮೌನ ಕ್ರಾಂತಿ ಆಗುತ್ತೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸಮರ್ಥಿಸಿಕೊಂಡ ಡಿಕೆಶಿ