Publish Date: Mon, 24 Apr 2023 (17:00 IST)
Updated Date: Mon, 24 Apr 2023 (17:47 IST)
ಲಿಂಗಾಯತ ಸಮುದಾಯದವರಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಅಂತ ಸಿದ್ದರಾಮಯ್ಯ ಹೇಳಿದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆಶಿ, ಬಿಜೆಪಿಯಲ್ಲಿದ್ದ ಗೂಳಿಹಟ್ಟಿ ಶೇಖರ್, ಹೆಚ್.ವಿಶ್ವನಾಥ್, ನೆಹರು ಓಲೇಕಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದನ್ನೇ ಸಿದ್ದರಾಮಯ್ಯ ಪುನರಾವರ್ತಿಸಿದ್ದಾರೆ. PSI ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ 80 ಲಕ್ಷ ರೂಪಾಯಿವರೆಗೆ ಲಂಚ ತೆಗೆದುಕೊಳ್ಳಲಾಗಿತ್ತು, ಇದೆಲ್ಲ ಯಾರ ಕಾಲದಲ್ಲಿ ಆಗಿದ್ದು ಎಂದು ಡಿಕೆಶಿ ಪ್ರಶ್ನಿಸಿದ್ರು.