Select Your Language

Notifications

webdunia
webdunia
webdunia
webdunia

ಸಿದ್ದುಗೆ ಚಕ್ರಾಧಿಪತ್ಯ ನಿಜವಾಯ್ತು ಯಶ್ವಂತ ಗುರೂಜಿ ಕಾಲಜ್ಞಾನ ಭವಿಷ್ಯ

Siddu Empire came true Yashwant Guruji's Chronological Prediction
bangalore , ಶನಿವಾರ, 20 ಮೇ 2023 (12:22 IST)
ಯಶ್ವಂತ ಗುರೂಜಿ
ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ರಾಜ ಗದ್ದುಗೆ ಹಿಡಿಯಲಿದ್ದಾರೆ ಎಂಬ ಕಾಲಜ್ಞಾನದ ಭವಿಷ್ಯ ಮತ್ತೆ ಸತ್ಯ ಆಗಿದೆ.ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಲಜ್ಞಾನಿ ಯಶ್ವಂತ ಗುರೂಜಿ ಸಿದ್ದುಗೆ ಚಕ್ರಾಧಿಪತ್ಯ ಲಭ್ಯ ಆಗಲಿದೆ ಅಂತಾ ಭವಿಷ್ಯ ಹೇಳಿದ್ದರು. ಗುರೂಜಿ ಭವಿಷ್ಯ ನಿಜ ಆಗಿದೆ.ಮುಖ್ಯಮಂತ್ರಿ ಕುರ್ಚಿಯ ಹಗ್ಗಾ-ಜಗ್ಗಾಟದ ಮುನ್ನವೇ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಪ್ರಾಪ್ತಿ ಆಗಲಿದೆ ಅಂತಾ ಕಾಲಜ್ಞಾನದ ಭವಿಷ್ಯ ಯಶ್ವಂತ ಗುರೂಜಿ ನುಡಿದಿದ್ದರು.
 
ಗುರೂಜಿಯ ಕಾಲಜ್ಞಾನದ ಭವಿಷ್ಯ ಮತ್ತೆ-ಮತ್ತೆ ನಿಜವಾಗುತ್ತಾ ಬರ್ತಿದೆ. ಈ ಹಿಂದೆ ಕಾಂಗ್ರೆಸ್‌ನ ಅಲೆ ರಾಜ್ಯದಲ್ಲಿ ಇಲ್ಲದೆ ಇದ್ದಂತಹ ಸಮಯದಲ್ಲೇ ಕಾಂಗ್ರೆಸ್ 135 ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಕಾಲಜ್ಞಾನದ ಭವಿಷ್ಯವನ್ನ ಯಥಾವತ್ತಾಗಿ ಗುರೂಜಿ ಈ ಮೊದಲೇ ಹೇಳಿದ್ದರು.
 
ನಿನ್ನೆ ಶುಕ್ರವಾರ ಅಮವಾಸ್ಯೆ. ಮರು ದಿನವಾದ ಇಂದು ಶನಿವಾರ. ಈ ಶನಿವಾರ ಸಿದ್ದರಾಮಯ್ಯ ಅವರಿಗೆ ವಾರದ ದೋಷ ಇದೆ. ಆದರೂ ತೊಂದರೆ ಇಲ್ಲ. 12.30ರಿಂದ 1.30ರ ಸಿಂಹ ಲಗ್ನದಲ್ಲಿ ಸಿದ್ದರಾಮಯ್ಯ ಪಟ್ಟಾಧಿಕಾರ ಮಾಡ್ತಿದ್ದಾರೆ. ಈ ಸಿಂಹ ಲಗ್ನದಲ್ಲೇ ಅಧಿಕಾರ ಸ್ವೀಕಾರ ಮಾಡಬೇಕು. ಒಂದು ವೇಳೆ ಈ ಸಮಯ ಮೀರಿದರೆ ರಾಜನಾದವನಿಗೆ ಅಧಿಕಾರ ಸ್ಥಿರ ಆಗಿದ್ದರೂ ಆರೋಗ್ಯ ಸ್ಥಿರವಾಗಿರೋದಿಲ್ಲ. ರಾಜನಾದವರು ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು ಎಂಬ ಕಾಲಜ್ಞಾನದ ಭವಿಷ್ಯವನ್ನ ಯಶ್ವಂತ ಗುರೂಜಿ  ಜನತೆ ಮುಂದೆ ಇಟ್ಟಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ-ಪ್ರಿಯಾಂಕ ಗಾಂಧಿ ಆಗಮನ