Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಶಾಮನೂರು ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಶಾಮನೂರು ವಾಗ್ದಾಳಿ
ದಾವಣಗೆರೆ , ಶುಕ್ರವಾರ, 19 ಅಕ್ಟೋಬರ್ 2018 (19:37 IST)
ಪ್ರತ್ಯೇಕ ಧರ್ಮ ಮತ್ತೆ ಜಗಳ ಪ್ರಾರಂಭ ಆಗಿದೆ. ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ ಮಾತು ಕೇಳಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮ ಶಿಫಾರಸು ಮಾಡಿ ತಪ್ಪು ಮಾಡಿ, ಸಮಾಜ ಒಡೆಯಲು ಮುಂದಾಗಿದ್ರು ಎಂದು ದಾವಣಗೆರೆಯಲ್ಲಿ ಶಾಸಕ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ.

ಜಾತಿಗಣತಿ ಮಾಡಿ ಸಮಾಜ ಒಡೆಯಲು ನೋಡಿದ್ರು, 110 ವರ್ಷ  ಸುಮ್ಮನಿದ್ದು ಇವಾಗ
ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ ಜೋರ್ ಮಾಡ್ತಾರೆ. ಇವರೇನು ಸುಪ್ರಿಂ..? ಎಂದು ಪ್ರಶ್ನೆ ಮಾಡಿದ್ರು.
ಡಿಕೆ‌ ವಿರುದ್ದ ದೂರು ಕೊಡ್ತಿವಿ ಎಂದಿದ್ದಾರೆ.

ಎಂ.ಬಿ. ಪಾಟೀಲ್, ವಿನಯ್ ವಿರುದ್ದ ನಾವು ಪಕ್ಷಕ್ಕೆ ದೂರ ಕೊಡ್ತಿವಿ. ಸಮಾಜ ಒಡೆಯುವ ಕೆಲಸ ತಪ್ಪು, ಬಿಡಬೇಕು, ಹಣ ಗರ್ವ ಬಿಟ್ಟು ಸರಿಯಾಗಿ ಮಾತನಾಡಲಿ, ಸಮಾಜ ಒಂದಾಗಲು ಸಹಕರಿಸಲಿ ಎಂದು ಶಾಮನೂರು ಹೇಳಿದ್ರು.
ಇನ್ನೂ ಬಸವಪ್ರಭು,  ಮೃತ್ಯುಂಜಯನಾಗಲಿ ಯಾರು ಸಮಾಜ ಒಡೆಯಬಾರದು. ವೀರಶೈವ ಅಂದ್ರು ಒಂದೇ, ಲಿಂಗಾಯಿತ ಒಂದೇ ಎಂದು ಸ್ವಾಮಿಗಳ ವಿರುದ್ದ ಶಾಮನೂರು ಏಕವಚನ ಪ್ರಯೋಗಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಚುಂಚನಗಿರಿಯಲ್ಲಿ ಉರಿಗದ್ದುಗೆ ಜ್ವಾಲಾಪೀಠೋಹರಣ