Publish Date: Mon, 14 Sep 2026 (16:48 IST)
Updated Date: Mon, 14 Sep 2026 (16:51 IST)
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನಲ್ಲಿ ತಮ್ಮ ನೂತನ ಮನೆ ಗೃಹಪ್ರವೇಶ ಮಾಡಿಕೊಂಡಿದ್ದಾರೆ. ಆದರೆ ಗೃಹಪ್ರವೇಶಕ್ಕೆ ಗಣಹೋಮ, ಪೂಜೆ ಮಾಡಿರುವುದಕ್ಕೆ ಬಲಪಂಥೀಯರು, ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಸಮಾಜವಾದಿ ನಾಯಕ ಎಂದೇ ಗುರುತಿಸಿಕೊಂಡವರು. ತಾವು ಸಿಎಂ ಆಗಿದ್ದಾಗಲೂ ಅಷ್ಟೇ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದುದು ಕಡಿಮೆ. ಪೂಜೆ, ಪುನಸ್ಕಾರಗಳಿಗಿಂತ ಸಮಾಜವಾದದಲ್ಲಿ ಹೆಚ್ಚು ನಂಬಿಕೆ ಎಂದು ಹೇಳುತ್ತಿದ್ದರು.
ಆದರೆ ಈಗ ತಮ್ಮ ಮನೆ ಗೃಹ ಪ್ರವೇಶಕ್ಕೆ ಪುರೋಹಿತರನ್ನು ಕರೆಸಿ ಗಣ ಹೋಮ, ಪೂಜೆ ಮಾಡಿರುವುದಕ್ಕೆ ಕೆಲವು ವರ್ಗದ ಜಾಲತಾಣ ಬಳಕೆದಾರರು ಟಾಂಗ್ ಕೊಡುತ್ತಿದ್ದಾರೆ. ಸಮಾಜವಾದಿ ನಾಯಕ ಪುರೋಹಿತರ ಕೈಯಲ್ಲಿ ಪೂಜೆ ಯಾಕೆ ಮಾಡಿಸಿಕೊಂಡರು ಎಂದು ಕೆಲವರು ಕಾಲೆಳೆದಿದ್ದಾರೆ.
ಹಾಗಿದ್ದರೂ ಸಿದ್ದರಾಮಯ್ಯನವರು ತಮ್ಮ ಮನೆ ಗೃಹಪ್ರವೇಶಕ್ಕೆ ಯಾರನ್ನೂ ಆಹ್ವಾನಿಸದೇ ಸರಳವಾಗಿ ಮಾಡಿಕೊಂಡಿದ್ದಾರೆ. ರಾಜಕೀಯವಿರಲಿ, ಯಾವುದೇ ಕ್ಷೇತ್ರದ ಗಣ್ಯರಿಗೂ ಆಹ್ವಾನ ನೀಡಿರಲಿಲ್ಲ. ತೀರಾ ಸರಳವಾಗಿ ತಮ್ಮ ಕುಟುಂಬದವರು ಮಾತ್ರ ಉಪಸ್ಥಿತರಿದ್ದು ಗೃಹಪ್ರವೇಶ ಮಾಡಿಕೊಂಡಿದ್ದಾರೆ. ಅಂತೂ ಮೈಸೂರಿನಲ್ಲಿ ಅವರ ಕನಸಿನ ಮನೆ ಪ್ರವೇಶ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ