Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗು

Siddaramaiah thunders against BJP
bangalore , ಮಂಗಳವಾರ, 9 ಆಗಸ್ಟ್ 2022 (21:24 IST)
ಬಿಜೆಪಿಯವರು ಹರ್ ಘರ್ ತಿರಂಗ ನಾಟಕ ಆಡುತ್ತಿದ್ದಾರೆ. ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಬಿಜೆಪಿ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದಾರಾ? ಸತ್ತಿದ್ದಾರಾ?, ಈ ನರೇಂದ್ರ ಮೋದಿ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು. ಇವರ ದೇಶಪ್ರೇಮ ತೋಳ ಕುರಿಮರಿ ಕತೆಯಾಗಿದೆ. ನರೇಂದ್ರ ಮೋದಿ ದೊಡ್ಡ ನಾಟಕಕಾರ. ಈ ನಕಲಿ ದೇಶಪ್ರೇಮಿಗಳ ಬಾಯಿಮುಚ್ಚಿಸುವ ಕಾರ್ಯ  ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು . ಇನ್ನೂ ಈ ವೇಳೆ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಹಿನ್ನೆಲೆಯಲ್ಲಿ ಟೋಪಿ ಮತ್ತು ಟೀ ಶರ್ಟ್ ಹಾಗೂ ಕರ ಪತ್ರವನ್ನು ಕೈ ನಾಯಕರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕೈಯಿಂದ ಕೆ.ಜೆ.ಜಾರ್ಜ್ಗೆ ಟೋಪಿ ಹಾಕಿಸಿದ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಕೈಲಿ ಉಗ್ರಪ್ಪಗೆ ಟೋಪಿ ಹಾಕಿಸಿದರು. ಬಳಿಕ ತಾವೇ ಸ್ವತಃ ಸಿದ್ದರಾಮಯ್ಯಗೆ ಟೋಪಿ ಹಾಕಿದರು. ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಸಿದ್ದರಾಮಯ್ಯ ತಲೆಗೆ ಟೋಪಿ ತೊಡಿಸಿದರು. ಡಿಕೆಶಿಗೆ ಸಿದ್ದರಾಮಯ್ಯ ಟೋಪಿ ಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ