Webdunia - Bharat's app for daily news and videos

Install App

ಥ್ಯಾಂಕ್ಸ್ ಮೇಡಂ... ಸೋನಿಯಾ ನಿವಾಸಕ್ಕೆ ಬಂದ ಸಿದ್ದರಾಮಯ್ಯ ಹೇಳಿದ್ದಿಷ್ಟು

ಕೃಷ್ಣವೇಣಿ ಕೆ
ಶುಕ್ರವಾರ, 29 ಮೇ 2026 (12:56 IST)
ನವದೆಹಲಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮೊನ್ನೆ ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯ ತಮ್ಮ ಸುದೀರ್ಘ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ನಿನ್ನೆ ಅವರು ಅಧಿಕೃತವಾಗಿ ಲೋಕಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು.

ಇದಾದ ಬಳಿಕ ಸಂಜೆ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಅವರು ಇಂದು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಸಚಿವ ಕೆಜೆ ಜಾರ್ಜ್ ಜೊತೆ ಅವರು ಇಂದು 10 ಜನಪತ್ ನಲ್ಲಿರುವ ಸೋನಿಯಾ ನಿವಾಸಕ್ಕೆ ಬಂದಿದ್ದಾರೆ.

ಬಳಿಕ ತಮಗೆ ಇಷ್ಟು ದಿನ ಅವಕಾಶ ನೀಡಿರುವುದಕ್ಕೆ, ಬೆಂಬಲಿಸಿರುವುದಕ್ಕೆ ಸೋನಿಯಾ ಗಾಂಧಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅದಾದ ಬಳಿಕ ಅವರು ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿ ಧನ್ಯವಾದ ಸಲ್ಲಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಲಿವುಡ್ ಸಿನಿಮಾವಲ್ಲ ಇದು ರಿಯಲ್…ನೇಪಾಳದಲ್ಲಿ ಇದ್ದಕ್ಕಿದ್ದಂತೆ ರಾಕ್ಷಸನಂತೆ ನುಗ್ಗಿಬಂದ ಅಲೆಗಳು Shocking video

ದೆಹಲಿ ತಲುಪಿದ ಸಚಿವ ಬಿ ನಾಗೇಂದ್ರ, ಮುಂದಿನ ನಡೆ ನಿಗೂಢ

ದಿಡೀರ್ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಈ ಭೇಟಿಯ ಹಿಂದಿದೆ ಮಹತ್ವದ ಕಾರಣ

ಪಾರ್ಸೆಲ್ ತಂದಿದ್ದು ಲೇಟ್ ಆಯ್ತು ಎಂದು ಹಲ್ಲೆ ಮಾಡಿದ ಮಹಿಳೆ: ನೋಡುವಷ್ಟು ನೋಡಿದ ಡೆಲಿವರಿ ಬಾಯ್ ಕೊನೆಗೆ ಮಾಡಿದ್ದೇನು Video

Video: ಗಂಡನನ್ನೇ ಉಸಿರುಗಟ್ಟಿಸಿ ಕೊಂದ ಹೆಂಡತಿ: ಶಾಕಿಂಗ್ ಘಟನೆಯ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments