Publish Date: Fri, 29 May 2026 (09:42 IST)
Updated Date: Fri, 29 May 2026 (11:21 IST)
ಬೆಂಗಳೂರು: ಸಿದ್ದರಾಮಯ್ಯ ಜೊತೆ ಸದಾ ಈ ಸಚಿವರಿದ್ದ ಹಾಗೆ ಡಿಕೆ ಶಿವಕುಮಾರ್ ಸಿಎಂ ಆದರೆ ಅವರ ಜೊತೆಗೆ ಇವರೆಲ್ಲಾ ಸಚಿವರಾಗಿರುವುದು ಗ್ಯಾರಂಟಿ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನಿನ್ನೆ ರಾಜೀನಾಮೆ ನೀಡಿದ್ದು ಡಿಕೆ ಶಿವಕುಮಾರ್ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಇದೀಗ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಕ್ಯಾಬಿನೆಟ್ ರಚನೆ ಬಗ್ಗೆ ಚರ್ಚಿಸಲು ಇಬ್ಬರೂ ದೆಹಲಿಗೆ ತೆರಳಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ತಮ್ಮ ಆಪ್ತರಿಗೆ ಮಣೆ ಹಾಕಿದ್ದರು. ಜಮೀರ್ ಅಹ್ಮದ್, ಮಹದೇವಪ್ಪ, ಭೈರತಿ ಸುರೇಶ್, ಪರಮೇಶ್ವರ್ ಸದಾ ಅವರ ಜೊತೆಗೇ ಇದ್ದರು. ಇವರೆಲ್ಲರೂ ಸಿದ್ದರಾಮಯ್ಯ ಆಪ್ತ ಬಳಗದಲ್ಲೇ ಇದ್ದರು.
ಇದೀಗ ಡಿಕೆ ಶಿವಕುಮಾರ್ ಆಪ್ತರೂ ಅವರು ಸಿಎಂ ಆದರೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಡಿಕೆ ಶಿವಕುಮಾರ್ ಗಾಗಿ ಸದಾ ಬ್ಯಾಟ್ ಮಾಡುತ್ತಿದ್ದವರು ಮಾಗಡಿ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಅಶೋಕ್ ಕುಮಾರ್ ರೈ ಮೊದಲಾದವರು ಇದ್ದೇ ಇರುತ್ತಾರೆ. ಆದರೆ ಡಿಕೆ ಶಿವಕುಮಾರ್ ಗೆ ಬಲಗೈ ಬಂಟನಂತೆ ಅವರ ಸಹೋದರ ಡಿಕೆ ಸುರೇಶ್ ಇದ್ದೇ ಇರುತ್ತಾರೆ. ಸದ್ಯಕ್ಕೆ ಡಿಕೆ ಸುರೇಶ್ ಶಾಸಕ ಅಥವಾ ಸಂಸದರಲ್ಲ. ಆದರೆ ಅಣ್ಣನ ಜೊತೆ ಸದಾ ಡಿಕೆ ಸುರೇಶ್ ಇದ್ದೇ ಇರುತ್ತಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ