Select Your Language

Notifications

webdunia
webdunia
webdunia
webdunia

ಸಿಎಂ ಸ್ಥಾನಕ್ಕೇರುವ ಮೊದಲೇ ಡಿಕೆ ಶಿವಕುಮಾರ್ ಗೆ ಗುಡ್ ನ್ಯೂಸ್

DK Shivakumar
ಬೆಂಗಳೂರು: ಸಿಎಂ ಸ್ಥಾನಕ್ಕೇರುವ ಮೊದಲೇ ಡಿಕೆ ಶಿವಕುಮಾರ್ ಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ವಿದೇಶಕ್ಕೆ ಹೋಗಲಿದ್ದ ನಿರ್ಬಂಧ ತೆರವಾಗಿದೆ.

ತೆರಿಗೆ ವಂಚನೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಗೆ ವಿದೇಶ ಪ್ರವಾಸಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇದೀಗ ಷರತ್ತುಬದ್ಧ ಜಾಮೀನು ವಿಚಾರದಲ್ಲಿ ಕೊಂಚ ಸಡಿಲಿಕೆ ಮಾಡಿರುವ ಬೆಂಗಳೂರು ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ 2 ವರ್ಷ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ.

ಹಾಗಂತ ಬೇಕಾಬಿಟ್ಟಿ ಹೋಗುವಂತಿಲ್ಲ. ಅದಕ್ಕೂ ಷರತ್ತು ವಿಧಿಸಲಾಗಿದೆ. ವಿವಿಧ ದೇಶಗಳಿಗೆ ಅಧಿಕೃತ ಉದ್ಯಮ ಪ್ರವಾಸ ಕೈಗೊಳ್ಳಲು ಷರತ್ತು ವಿಧಿಸಿ ಅನುಮತಿ ನೀಡಿದೆ. ಮುಂದಿನ 2 ವರ್ಷಗಳಲ್ಲಿ ಕೆಲವು ರಾಷ್ಟ್ರಗಳಿಗೆ ಮಾತ್ರ ಸಂಚರಿಸಲು ಅವಕಾಶವಿದೆ.

ಆ ಪೈಕಿ ಯುರೋಪ್, ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ರಷ್ಯಾ ಮತ್ತು ಅರಬ್ ರಾಷ್ಟ್ರಗಳಿಗೆ ಹೋಗಲು ಡಿಕೆ ಶಿವಕುಮಾರ್ ಗೆ ನ್ಯಾಯಾಲಯ ಅನುಮತಿ ನೀಡಿದೆ. ಪ್ರತೀ ಬಾರಿಯೂ ವಿದೇಶ ಪ್ರವಾಸಕ್ಕೆ ತೆರಳುವಾಗ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದರೆ ಆದೇಶ ರದ್ದು ಮಾಡುವ ಸಾಧ್ಯತೆಯೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಜೊತೆ ಈ ಸಚಿವರಿದ್ದ ಹಾಗೆ ಡಿಕೆ ಶಿವಕುಮಾರ್ ಜೊತೆ ಇವರಿರೋದು ಗ್ಯಾರಂಟಿ