Publish Date: Sat, 20 Apr 2019 (13:19 IST)
Updated Date: Sat, 20 Apr 2019 (13:21 IST)
ಬೆಳಗಾವಿ : ಸಿದ್ದರಾಮಯ್ಯನ ಆತ್ಮ ಕೊಪ್ಪಳದಲ್ಲಿದೆ ಎಂಬ ಬಿ.ಎಲ್ ಸಂತೋಷ್ ಗೆ ಹೇಳಿಕೆಗೆ ಇದೀಗ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆತ್ಮ ಎಲ್ಲಾ ಕಡೆ ಇದೆ. ನನ್ನ ಆತ್ಮ ಹೃದಯದಲ್ಲಿದೆ. ಎಲ್ಲಾ ಕಡೆ ಇರೋಕೆ ನಾನೇನು ದೇವರು ಅಲ್ಲ. ಬಿ.ಎಲ್ ಸಂತೋಷ್ ಗೆ ಬುದ್ಧಿ ಇಲ್ಲ. ಸೋಲುತ್ತೇವೆ ಎಂಬ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಾಗೇ ಬಿಜೆಪಿ ಕಡೆ ಬೆರಳು ಮಾಡಿದ್ರೆ, ಕೈ ಕಟ್ ಮಾಡುತ್ತೀನಿ ಎಂದು ಕೇಂದ್ರ ಸಚಿವ ಮನೋಜ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಹೊಡಿ, ಬಡಿ ಕೊಲೆ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.