Publish Date: Sat, 01 Apr 2017 (13:08 IST)
Updated Date: Sat, 01 Apr 2017 (13:11 IST)
ಅನುಮತಿ ಪಡೆಯದೇ ಇನ್ನೋವಾ ಕಾರು ತಂದಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಕಾರನನ ಚುನಾವಣಾಧಿಕಾರಿಗಳು ಸೀಜ್ ಮಾಡಿರುವ ಘಟನೆ ಗುಂಡ್ಲುಪೇಟೆ ಕಾಂಗ್ರೆಸ್ ಕಚೇರಿ ಬಳಿ ನಡೆದಿದೆ.
ಯತೀಂದ್ರ ನಂಜನಗೂಡು ಕ್ಷೇತ್ರದಲ್ಲಿ ಪ್ರಚಾರಕ್ಕೆ ಅನುಮತಿ ಪಡೆದಿದ್ದರು. ಗುಂಡ್ಲುಪೇಟೆ ಪ್ರಚಾರಕ್ಕೆ ಬಳಸಲು ಕಾರಿಗೆ ಅನುಮತಿ ಪಡೆದಿರಲಿಲ್ಲ.
ಕಾಂಗ್ರೆಸ್ ಕಚೇರಿಯಿಂದ ಸಿಎಂ ಜೊತೆ ಹೊರಬಂದ ಯತೀಂದ್ರ ಕಾರನ್ನ ಹತ್ತಿ ಮುಂದಾಗಲು ತ್ನಿಸಿದಾಗ ಚುನಾವಣಾಧಿಕಾರಿಗಳು ಕಾರು ಸೀಜ್ ಮಾಡಿದ್ದಾರೆ. ಬಳಿಕ ಯತೀಂದ್ರ ಸೊಲ್ಲೆತ್ತದ ಯತೀಂದ್ರ ತಂದೆಯ ಕಾರಿನಲ್ಲೇ ಪ್ರಚಾರಕ್ಕೆ ತೆರಳಿದ್ದಾರೆ.